ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕುಂಠಿತ

Development is stunted by the state government.
Development is stunted by the state government.
Published on
ತುರುವೇಕೆರೆ: ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಸದ್ಯ ಮಳೆಯೂ ಇಲ್ಲದಾಗಿದೆ. ಹೇಮಾವತಿ ನೀರನ್ನೂ ಸಹ ಕಾಲುವೆಯಿಂದ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕನ್ವೆನ್ಷನ್​ ಹಾಲ್​ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ತಾಲೂಕು ಜೆಡಿಎಸ್​ನಿಂದ ತಮ್ಮ ಬಿಎಲ್​ಎ 2 ಕಾರ್ಯಕರ್ತರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈಗ ಮಾಡುತ್ತಿರುವ ಕಾರ್ಯ ಹೊಸ ಮತದಾರ ಪಟ್ಟಿಯ ತಯಾರಿಕಾ ಪ್ರಯತ್ನ. ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ತೋರಬಾರದು. ಇದು ದೇಶದ ಭದ್ರತೆಯ ಪ್ರಶ್ನೆ. ನಮ್ಮ ಜೆಡಿಎಸ್​ ಕಾರ್ಯಕರ್ತರು ಪ್ರತಿ ಮನೆ, ಪ್ರತಿ ವಾರ್ಡಿನಲ್ಲಿ ಮತದಾರರ ಗುರುತನ್ನು ಪತ್ತೆ ಮಾಡಬೇಕು. ಎರೆಡೆರೆಡು ಕಡೆ ಮತಪಟ್ಟಿಯಲ್ಲಿ ಹೆಸರಿದ್ದರೆ ಒಂದೇ ಕಡೆ ಹೆಸರು ಇರುವಂತೆ ಮಾಡಿ ಎಂದರು.
ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗಿರುವುದು ಸಂತೋಷವೇ. ಆದರೆ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿಯನ್ನು ಉಳಿಸಿಕೊಳ್ಳಲು ಹಾಗೂ ತಾವು ಲಿಂಕ್​ ಚಾನಲ್​ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯ ಜೆಡಿಎಸ್​ ವಕ್ತಾರ ಪ್ರದಿಪ್​ ಮಾತನಾಡಿ, ಭಾರತ ಚುನಾವಣಾ ಆಯೋಗ ಮತದಾರ ಪಟ್ಟಿಯನ್ನು ಸಿದ್ಧಪಡಿಸುವ ಸಲುವಾಗಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಜಾರಿಗೊಳಿಸಿದ್ದು, ಇದು ಪ್ರಜಾಪ್ರಭುತ್ವದಲ್ಲಿ ಆಗಬೇಕಾಗಿರುವ ಮೊದಲ ಕೆಲಸವಾಗಿದೆ ಎಂದು ತಿಳಿಸಿದರು.
ಮುಖಂಡರಾದ ಹಿಂಡುಮಾರನಹಳ್ಳಿ ನಾಗರಾಜು, ಬಡಗರಹಳ್ಳಿ ತ್ಯಾಗರಾಜ್​, ಮಾವಿನಹಳ್ಳಿ ರಂಜಿತ್​ ಕುಮಾರ್​, ಲಕ್ಷ್ಮಣಗೌಡ, ಎಸ್ಸಿ ಘಟಕದ ಅಧ್ಯಕ್ಷ ಕಲ್ಲಬೋರನಹಳ್ಳಿ ಜಯರಾಮಯ್ಯ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net