ಸವಾಲು ಎದುರಿಸುವ ಶಕ್ತಿ ಬೆಳೆಸಿಕೊಳ್ಳಿ

Develop the strength to face challenges
Develop the strength to face challenges
Published on
ತಿಪಟೂರು: ಹೆಣ್ಣು ಮಕ್ಕಳಲ್ಲಿ ಸಂಕುಚಿತ ಭಾವನೆ ಬರದಂತೆ ಅವರಲ್ಲಿ ಆತ್ಮವಿಶ್ವಾಸ ತುಂಬುವಂತಹ ವಿಶಾಲತೆ ಬೆಳಸಿಕೊಳ್ಳಬೇಕು ಎಂದು ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ತಿಳಿಸಿದರು.
ತಾಲೂಕಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಹೆಣ್ಣು ಜೀವನದಲ್ಲಿ ಬರುವ ಸವಾಲುಗಳಿಗೆ ಅಂಜಿ ಮೂಲೆಗುಂಪಾಗಬಾರದು. ಸವಾಲುಗಳನ್ನು ಎದುರಿಸುವ ಶಕ್ತಿ, ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ಸತೀಶ್​ ಕುಮಾರ್​ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಹೆಣ್ಣು ಎಲ್ಲ ವಿಭಾಗಗಳಲ್ಲಿ ಗಂಡುಮಕ್ಕಳನ್ನು ಹಿಂದಿಕ್ಕೆ ಬೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಅಭಿರುಚಿ ಇಚ್ಛಾಶಕ್ತಿಯಾಗಿರುತ್ತದೆ. ಅಲ್ಲದೆ ನಾನು ಈ ಮಟ್ಟಿಗೆ ಬೆಳೆಯಲು ಕಾರಣರಾದ ತಮ್ಮ ಅಜ್ಜಿ, ತಾಯಿ, ತಂಗಿಯರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್​ ಶಿವಪ್ರಸಾದ್​ ಮಾತನಾಡಿ, ಹೆಣ್ಣು ತನ್ನ ಜವಾಬ್ದಾರಿಗಳನ್ನು ಅತ್ಯಂತ ದಿಟ್ಟವಾಗಿ ನಿರ್ವಹಿಸುತ್ತಾಳೆ. ಕಠಿಣ ಪರಿಸ್ಥಿತಿಗಳು ಬಂದರೂ ತಾನು ಹಿಡಿದ ಕೆಲಸವನ್ನು ಬಿಡದೆ ಮುಗಿಸುವ ಶಕ್ತಿ ಅವಳಿಗಿದೆ. ಮನೆಯ ಸರ್ವತೋಮುಖ ಬೆಳೆವಣಿಗೆಗೆ ಅವಳ ಕೊಡುಗೆ ಅಪಾರ ಎಂದರು.
ಡಾ.ಚಂದ್ರಕಲಾ, ಸದಸ್ಯರಾದ ಡಾ.ದೀಪ್ತಿ ಅಮಿತ್​, ಡಾ.ನಿಮಾರ್ಲಾದೇವಿ, ಡಾ.ಹನುಮಂತಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net