ವಿದ್ಯೆ ಜತೆಗೆ ವಾಕ್​ಚಾತುರ್ಯ ಬೆಳೆಸಿಕೊಳ್ಳಿ / VIJAYAPUR

ವಿಜಯಪುರ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಹಂತಿನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್​ ಶಿವಕುಮಾರ್​, ಎಎಸ್​ವಿಎನ್​ವಿ ಸಂಘದ ರವೀಂದ್ರ, ಹರಿಹರ ದಾಸೋಹ ಸಮಿತಿ ಪದಾಧಿಕಾರಿ ಎನ್​.ರುದ್ರಮೂರ್ತಿ, ಕೋರಮಂಗಲ ರುದ್ರಪ್ಪ ಟ್ರಸ್ಟ್​ ಅಧ್ಯಕ್ಷ ಸಿ.ಭಾಸ್ಕರ್​ ಇದ್ದರು.
ವಿಜಯಪುರ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಹಂತಿನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್​ ಶಿವಕುಮಾರ್​, ಎಎಸ್​ವಿಎನ್​ವಿ ಸಂಘದ ರವೀಂದ್ರ, ಹರಿಹರ ದಾಸೋಹ ಸಮಿತಿ ಪದಾಧಿಕಾರಿ ಎನ್​.ರುದ್ರಮೂರ್ತಿ, ಕೋರಮಂಗಲ ರುದ್ರಪ್ಪ ಟ್ರಸ್ಟ್​ ಅಧ್ಯಕ್ಷ ಸಿ.ಭಾಸ್ಕರ್​ ಇದ್ದರು.
Published on

ವಿಜಯಪುರ :

ಮಕ್ಕಳು ಇಷ್ಟಪಟ್ಟು ವ್ಯಾಸಂಗ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯೆಯ ಜತೆಗೆ ವಾಕ್​ಚಾತುರ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅಯೋಧ್ಯಾ ನಗರದ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್​ ಶಿವಕುಮಾರ್​ ತಿಳಿಸಿದರು.

ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಮಹಂತಿನ ಮಠ ಧರ್ಮ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆಯಲ್ಲಿ ಮಾತನಾಡಿ, ಸಂಸ್ಥೆ ನೀಡುವ ಸಹಾಯಧನವನ್ನು ವಿದ್ಯಾರ್ಥಿಗಳು ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉತ್ತಮ ಹುದ್ದೆ ಅಲಂಕರಿಸಿದಾಗ, ಸಮಾಜದ ಇತರ ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡುವ ಮೂಲಕ ಸಂಸ್ಥೆಯ, ಸಮಾಜದ ಗೌರವ ಹೆಚ್ಚಿಸಬೇಕು ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ವಿಶ್ವನಾಥ್​ ಮಾತನಾಡಿ, ನಮ್ಮ ಸಂಸ್ಥೆ 1934ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಹಲವು ಮಹನೀಯರ ಶ್ರಮದಿಂದ ಕಟ್ಟಡ ನಿಮಾರ್ಣವಾಗಿದೆ. ಸುಮಾರು 60 ವರ್ಷಗಳಿಂದ ಅಶಕ್ತರಿಗೆ ಸಹಾಯಧನ ನೀಡಲಾಗುತ್ತಿದ್ದು, ಕೋರಮಂಗಲ ರುದ್ರಪ್ಪ ಅವರು ವಿದ್ಯಾರ್ಥಿ ನಿಲಯಕ್ಕೆ ಕಟ್ಟಡ ನೀಡಿದ್ದರೆ, ಮೇಲೂರು ಪುಟ್ಟಯ್ಯ ಅವರು ಶ್ರೀವಿರಭದ್ರ ಸ್ವಾಮಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಪ್ರಸ್ತುತ ನಾವೆಲ್ಲರೂ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಎಎಸ್​ವಿಎನ್​ವಿ ಸಂಘದ ರವೀಂದ್ರ ಮಾತನಾಡಿ, ನಮ್ಮ ಜನಾಂಗಕ್ಕೆ 2,000 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಸಮಾಜ ನೀಡುವ ಪ್ರೋತ್ಸಾಹಧನವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಓದಿದರೆ ಖಂಡಿತ ಫಲ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಚಾರ್ರ್ಟಡ್​ ಅಕೌಂಟೆಂಟ್​ ಬಿ.ಚೇತನ್​, ಸಿಇಟಿಯಲ್ಲಿ ಪ್ರಥಮ ರ್ಯಾಕ್​ ಪಡೆದ ಕುಮಾರಿ ಜಾಗೃತಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ 2025-&26ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಬಸವಣ್ಣ ದೇವಾಲಯದ ಅಧ್ಯಕ್ಷ ಪಿ.ಬಸವರಾಜು, ನಗರ್ತ ಯುವಕ ಸಂಘದ ಮಾಜಿ ಗೌರವಾಧ್ಯಕ್ಷ ಪಿ.ಮುರುಳಿಧರ್​, ಖಜಾಂಚಿ ಎ.ಮಧು, ನಿರ್ದೇಶಕರಾದ ಪಿಸಿ ಕೆ.ವಿಜಯ್​ ರಾಜ್​, ಜಿ.ನಂಜಣ್ಣ, ಸಿ.ವಿನಯ್​ ಕುಮಾರ್​, ಎನ್​.ಪ್ರವಿಣ್​, ವಿ.ಬಸವರಾಜ್​, ಸುರೇಶ್​ ಬಾಬು, ಚಂಪಕವಲ್ಲಿ ನಾಗರಾಜ್​, ನಳಿನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net