ಗುರಿ ಸಾಧಿಸಲು ಛಲ ಮುಖ್ಯ

ಬಾಗೇಪಲ್ಲಿ ತಾಲೂಕಿನ ಪೋಲನಾಯಕನಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.ಮಾಲತಿ ನಾಗಪ್ಪ,ಮುಖ್ಯಶಿಕ್ಷಕ ಸಿ.ವೆಂಕಟರವಣ, ಶಿಕ್ಷಕರಾದ ಜಿ.ಶಾಂತಮ್ಮ, ವಿ.ಅನಿತಾ, ಅತಿಥಿ ಶಿಕ್ಷಕ ನಾಗೇಶ್​, ಜಯಲಕ್ಷಿ$್ಮ, ಸುಧಾ ರವೀಂದ್ರನಾಥ, ವಿಜಯ ಮೋಹನರಾವ್​ ಇದ್ದರು.

Published on

ಪಾತಪಾಳ್ಯ :

ವಿದ್ಯಾರ್ಥಿಗಳು ಗುರಿ ಸಾಧಿಸಬೇಕಾದರೆ ಛಲದಿಂದ ಅಧ್ಯಯನ ಮಾಡಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಘದ ಉಪಾಧ್ಯಕ್ಷೆ ಮಾಲತಿ ನಾಗಪ್ಪ ತಿಳಿಸಿದರು.

ಪೋಲನಾಯಕನಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ್ದ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕನಸನ್ನು ನನಸು ಮಾಡಲು ನಿರಂತರ ಪ್ರಯತ್ನಿಸಬೇಕು. ಮಗುವಿನ ಶಿಕ್ಷಣ ಮತ್ತು ಜೀವನ ರೂಪಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ.
ವಿದ್ಯಾರ್ಥಿಗಳಿಗೆ ದೃಢ ಸಂಕಲ್ಪ ಅವಶ್ಯಕ. ಮನಸ್ಸಿನ ಏಕಾಗ್ರತೆ ಮತ್ತು ಪ್ರಯತ್ನದಿಂದ ಏನನ್ನಾದರೂ ಸಾಧಿಸಲು ಸಾಧ್ಯ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಿಕ್ಷಕ ಎ.ಆರ್​.ಪಾಪಣ್ಣ ಮಾತನಾಡಿ, ಜೀವನದಲ್ಲಿ ಗುರಿ ಮತ್ತು ಗುರುಗಳ ಅಗತ್ಯವಿದೆ. ಸ್ವಾಭಿಮಾನ ಇಲ್ಲದಿರುವುದರಿಂದ ಮನುಷ್ಯ ಸಂಕಷ್ಟ ಎದುರಿಸುತ್ತಿದ್ದಾನೆ. ಸ್ವಾಭಿಮಾನ ಇದ್ದಾಗ ಸಾಧನೆ ಸಾಧ್ಯ. ಮಾಲತಿ ನಾಗಪ್ಪ ಮಕ್ಕಳಿಗೆ ಪರಿಕರಗಳನ್ನು ವಿತರಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net