ದೇಸಾಯಿ ಸಮಾಜ ಕಾರ್ಯಕ್ಕೆ ಶ್ರಮಿಸಿದ ನಾಯಕ

ಕೆಂಭಾವಿಯಲ್ಲಿ ಶುಕ್ರವಾರ ಹಮ್ಮಿಕೊಂಡ ದಿ.ನಿಂಗನಗೌಡ ದೇಸಾಯಿ ಹದನೂರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶ್ರೀ ಚನ್ನಬಸವ ಶಿವಾಚಾರ್ಯ, ಲಿಂಗನಗೌಡ ಮಾಲಿ ಪಾಟೀಲ್, ಸಿದ್ಧನಗೌಡ ಪೊಲೀಸ್ ಪಾಟೀಲ್, ಶಂಕ್ರಣ್ಣ ವಣಕ್ಯಾಳ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ ಇತರರಿದ್ದರು.
ಕೆಂಭಾವಿಯಲ್ಲಿ ಶುಕ್ರವಾರ ಹಮ್ಮಿಕೊಂಡ ದಿ.ನಿಂಗನಗೌಡ ದೇಸಾಯಿ ಹದನೂರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶ್ರೀ ಚನ್ನಬಸವ ಶಿವಾಚಾರ್ಯ, ಲಿಂಗನಗೌಡ ಮಾಲಿ ಪಾಟೀಲ್, ಸಿದ್ಧನಗೌಡ ಪೊಲೀಸ್ ಪಾಟೀಲ್, ಶಂಕ್ರಣ್ಣ ವಣಕ್ಯಾಳ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಸದಸ್ಯ ಲಿಂಗನಗೌಡ ಮಾಲಿ ಪಾಟೀಲ್ ಬಣ್ಣನೆ
  • ಕೆಂಭಾವಿಯಲ್ಲಿ ನುಡಿನಮನ
ಕೆಂಭಾವಿ ; ಕೆAಭಾವಿ ಪಟ್ಟಣ ತಾಲೂಕು ಕೇಂದ್ರ ಮಾಡಲು ದಿ.ನಿಂಗನಗೌಡ ದೇಸಾಯಿ ಹದನೂರ ಅವರು ತಮ್ಮ ಸ್ವ ಹಿತಾಸಕ್ತಿ ಬದಿಗೊತ್ತಿ ಪರರ ಕಲ್ಯಾಣಕ್ಕೆ ಶ್ರಮಿಸಿದ ಮಹಾನ್ ಮುಂಚೂಣಿ ನಾಯಕ ಎಂದು ಜಿಪಂ ಮಾಜಿ ಸದಸ್ಯ ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡ ಕೆಂಭಾವಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ದಿ.ನಿಂಗನಗೌಡ ದೇಸಾಯಿ ಹದನೂರ ಅವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದದರು.
ಸರ್ಕಾರಿ ಜವಾನನಿಂದ ಮುಖ್ಯಮಂತ್ರಿವರೆಗೂ ತಾಲೂಕು ಕೇಂದ್ರಕ್ಕೆ ಅರ್ಜಿ ಸಲ್ಲಿಸುವ ಮೂಲಕ ದಿ.ದೇಸಾಯಿ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಆದರೆ ಅವರ ಆಸೆ ಕೈಗೂಡದೇ ಇರುವುದು ನಮಗೆಲ್ಲರಿಗೆ ನೋವು ತರಿಸಿದ್ದು, ಈಗ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಗಮನ ಹರಿಸಿ ಕೆಂಭಾವಿಯನ್ನು ತಾಲೂಕು ಕೇಂದ್ರ ಮಾಡುವ ಮೂಲಕ ಮೃತ ಹೋರಾಟಗಾರ ದೇಸಾಯಿ ಅವರ ಆತ್ಮಕ್ಕೆ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ ಮಾತನಾಡಿ, ದೇಸಾಯಿ ಅವರ ಆಸೆ ಕೈಗೂಡದೆ ಇರುವುದು ನಮ್ಮ ಮನಸ್ಸಿಗೂ ಬೇಸರವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿಧೇರ್ಶಕ ಬಾಪುಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಬಸನಗೌಡ ಹೊಸಮನಿ, ಬಸವರಾಜ ಚಿಂಚೋಳಿ, ಈರಣ್ಣ ದೇಸಾಯಿ ಹದನೂರ, ಹಳ್ಳೆಪ್ಪ ಹವಾಲ್ದಾರ, ಅಮೀನರೆಡ್ಡಿಗೌಡ ಕಿರದಳ್ಳಿ, ಮಹಿಪಾಲರೆಡ್ಡಿ ಡಿಗ್ಗಾವಿ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ರಾಜಶೇಖರ ದೇಸಾಯಿ, ಅಮ್ಮಣ್ಣ ಧರಿ, ಮಲ್ಲಿಕಾರ್ಜುನ ಸ್ವಾಮಿ ಸೇರಿ ದೇಸಾಯಿ ಕುಟುಂಬದ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೋರಾಟ ಸಮಿತಿಯ ಪ್ರಮುಖರು ಭಾಗವಹಿಸಿದ್ದರು. ಡಾ.ಯಂಕನಗೌಡ ಪಾಟೀಲ್ ನಿರೂಪಿಸಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net