ಮಾಜಿ ಸೈನಿಕರ ಹಣ ಮರಳಿಸಿ

ಮಾಜಿ ಸೈನಿಕರ ಹಣ ಮರಳಿಸುವಂತೆ ಒತ್ತಾಯ
ಮಾಜಿ ಸೈನಿಕರ ಹಣ ಮರಳಿಸುವಂತೆ ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸೈನಿಕರ ಹಣ ಮರಳಿಸಿ
  • ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗದೀಶ ಸುದ್ದಿಗೋಷ್ಠಿ
  • ಶಿವಂ ಅಸೋಸಿಯೇಟ್ಸ್ ಹಣ ಹೂಡಿಕೆ ಮಾಡಿರುವ ಮಾಜಿ ಸೈನಿಕರು
ಮಾಜಿ ಸೈನಿಕರ ಹಣ ಮರಳಿಸಿ
|ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮನವಿ | ಸುದ್ದಿಗೋಷ್ಠಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಶಿವಾನಂದ ನೀಲಣ್ಣವರ್ ಅವರಿಗೆ ಸೇರಿರುವ ಶಿವಂ ಅಸೋಸಿಯೇಷನ್‌ನಲ್ಲಿ ಹಣ ಹೂಡಿಕೆ ಮಾಡಿರುವ ಮಾಜಿ ಸೈನಿಕರಿಗೆ ಹಣ ಮರಳಿಸಬೇಕು ಎಂದು ಮಾಜಿ ಸೈನಿಕರ ಸಂಘಗಳ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ರಾಜ್ಯ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಅನೇಕ ಮಾಜಿ ಸೈನಿಕರು ತಮ್ಮ ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣವನ್ನು ಸಂಗ್ರಹಿಸಿದ್ದಾರೆ. ದೇಶ ಸೇವೆ ಮಾಡಿದ ಸೈನಿಕರು ಒಳ್ಳೆಯ ಸದುದ್ದೇಶದಿಂದ ಹಾಗೂ ಹೆಚ್ಚಿನ ನಂಬಿಕೆಯಿಂದ ಹಣ ಹೂಡಿಕೆ ಮಾಡಿದ್ದರು. ಅವರಿಗೆ ಸಮಸ್ಯೆಯಾಗಿ ಹಣ ಮರಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಕರಣದ ಕುರಿತು ಸಮಗ್ರ ತನಿಖೆಯಾಗಲಿ. ಆದರೆ ಮೊದಲ ಹಂತದಲ್ಲೇ ಮಾಜಿ ಸೈನಿಕರ ಪರಿಸ್ಥಿತಿಯನ್ನು ಪರಿಗಣಿಸಿ ಅವರಿಗೆ ಹಣ ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಿದರು.ಸೈನಿಕರು ದೇಶದ ಗಡಿಯಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿ ಬಂದವರು. ನಿವೃತ್ತಿಯ ಬಳಿಕ ತಮ್ಮ ಕುಟುಂಬದ ಆಸ್ತಿಯನ್ನು ಸಂಗ್ರಹಿಸಿದ ಇಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಇದೀಗ ಸಿಲುಕಿದ್ದಾರೆ. ಮಾಜಿ ಸೈನಿಕರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಹೇಳಿದರು.
ರಮೇಶ ಚೌಗಲಾ,ಶಿವಬಸಪ್ಪ ಕಾಡನ್ನವರ,ಮಹೇಶ ಕಮ್ಮಾರ, ಸಂತೋಷ ಹಿರೇಮಠ, ಅಶೋಕ ಮಜಗಿ, ರಾಮಚಂದ್ರ ಸುತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net