ಕೃಷಿ ಸಾಲ ಮನ್ನಾ ಮಾಡಲು ಒತ್ತಾಯ

ತಿಕೋಟಾ ತಾಲೂಕು ಪ್ರದೇಶವನ್ನು ಬರಗಾಲವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಿಕೋಟಾದಲ್ಲಿ ತಹಸೀಲ್ದಾರ್ ಎಚ್.ಎನ್. ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು. ಸಾತಲಿಂಗಯ್ಯ ಸಾಲಿಮಠ, ಸಂಗಮೇಶ ಸಗರ, ಸಂಗೀತಾ ರಾಠೋಡ ಮತ್ತಿತರರಿದ್ದಾರೆ.
ತಿಕೋಟಾ ತಾಲೂಕು ಪ್ರದೇಶವನ್ನು ಬರಗಾಲವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಿಕೋಟಾದಲ್ಲಿ ತಹಸೀಲ್ದಾರ್ ಎಚ್.ಎನ್. ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು. ಸಾತಲಿಂಗಯ್ಯ ಸಾಲಿಮಠ, ಸಂಗಮೇಶ ಸಗರ, ಸಂಗೀತಾ ರಾಠೋಡ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ತಹಸೀಲ್ದಾರ್‌ಗೆ ಮನವಿ
ವಿಜಯಪುರ : ತಿಕೋಟಾ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೋಮವಾರ ತಿಕೋಟಾ ಪಟ್ಟಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಎಚ್.ಎನ್. ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಮಾತನಾಡಿ, ತಿಕೋಟಾ ತಾಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮು ಮಳೆ ಕೈಕೊಟ್ಟಿದೆ. ಅಲ್ಲದೆ, ಹಿಂಗಾರಿ ಮಳೆಯ ಲಕ್ಷಣಗಳು ಈವರೆಗೆ ಗೋಚರಿಸುತ್ತಿಲ್ಲ. ಅದರಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಳೆಯ ಅಭಾವದಿಂದ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದ್ದು, ಸರ್ಕಾರ ಕೂಡಲೇ ಬರಗಾಲ ಪ್ರದೇಶವೆಂದು ಘೋಷಣೆ ಜತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಗ್ರಹಿಸಿದರು.

ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ತಾಲೂಕಾದ್ಯಂತ ಕೆರೆ, ಹಳ್ಳಕೊಳ್ಳಗಳಲ್ಲಿ ಒಂದು ಹನಿ ನೀರಿಲ್ಲ. ಅಲ್ಲದೆ, ಇಲ್ಲಿನ ಬೋರ್‌ವೆಲ್‌ಗಳು ಬತ್ತಿದ್ದು ಅರ್ಧ ಗಂಟೆ ಕೂಡ ನೀರು ಬರುತ್ತಿಲ್ಲ. ಹೀಗಾಗಿ, ಜಾನುವಾರುಗಳಿಗೆ, ಜನರಿಗೆ, ಪಶು-ಪಕ್ಷಿಗಳಿಗೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದು, ಸರ್ಕಾರ ಕೂಡಲೇ ತಾಲೂಕಿನಾದ್ಯಂತ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಘಟಕ ಅಧ್ಯಕ್ಷೆ ಸಂಗೀತಾ ರಾಠೋಡ, ಶ್ರೀಶೈಲ ಬಿರಾದಾರ, ಶಾನೂರ ನಂದರಗಿ, ಧರೆಪ್ಪ ಅನಂತಪೂರ, ಶಿವಪ್ಪ ಪಟ್ಟಣಶೆಟ್ಟಿ, ನಜೀರ ನಂದರಗಿ, ಗುರುಪಾದ ಹಿಪ್ಪರಗಿ, ಸುರೇಶ ಇಟಿ, ಮೋಶಿನ ಮುಜಾವರ, ಸುರೇಶ ಕೊಣ್ಣೂರ, ರವಿಕುಮಾರ ಹೊಸೂರ, ಶಿವಾನಂದ ಮುಂಜಾನವರ, ರಾಮಗೊಂಡ ಕೊಂಡಿ, ಬುಳ್ಳಪ್ಪ ಪೂಜಾರಿ, ಪರಗೊಂಡ ಬಡಿಗೇರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net