ಭೀಮಾ ನದಿಗೆ ನೀರು ಹರಿಸಲು ಒತ್ತಾಯ

ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇಂಡಿ ನಗರದ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿಗೆ ಸಲ್ಲಿಸಿದರು. ಬಾಳು ಮುಳಜಿ, ಮಹೇಶ ಹೂಗಾರ, ರಾಮಸಿಂಗ ಕನ್ನೊಳ್ಳಿ, ವಿಠ್ಠಲ ಸೊನ್ನ ಮತ್ತಿತರರಿದ್ದರು.
ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇಂಡಿ ನಗರದ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿಗೆ ಸಲ್ಲಿಸಿದರು. ಬಾಳು ಮುಳಜಿ, ಮಹೇಶ ಹೂಗಾರ, ರಾಮಸಿಂಗ ಕನ್ನೊಳ್ಳಿ, ವಿಠ್ಠಲ ಸೊನ್ನ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಕಾರ್ಯಕರ್ತರ ಆಗ್ರಹ
  • ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಕೆ
ಇಂಡಿ: ಭೀಮಾ ನದಿ ನೀರನ್ನು ನದಿಯ ದಡಗಳಲ್ಲಿರುವ ಒಟ್ಟು 164 ಹಳ್ಳಿ, 10 ನಗರ ಲಕ್ಷಾಂತರ ಜನ ಮತ್ತು ಜಾನುವಾರು ನಂಬಿಕೊಂಡು ಬದುಕುತ್ತಿದ್ದಾರೆ. ಹಾಗಾಗಿ ಕೂಡಲೇ ಭೀಮಾನದಿಗೆ ನೀರು ಹರಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕೆಂದು ಕರವೇ ಕಾರ್ಯಕರ್ತರು ಕಂದಾಯ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಈ ಬಾರಿ ಭೀಕರ ಬರಗಾಲ ಆವರಿಸಿದೆ. ಭೀಮಾನದಿ ನೀರನ್ನೇ ನಂಬಿಕೊಂಡಿರುವ ಇಂಡಿ, ಚಡಚಣ, ಆಲಮೇಲ, ಸಿಂದಗಿ ತಾಲೂಕಿನ ರೈತರಿಗೆ, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಏರ್ಪಟ್ಟಿದೆ. ಆದ್ದರಿಂದ ಭೀಮಾನದಿಗೆ ಕಾನೂನಾತ್ಮಕವಾಗಿ ಬರಬೇಕಿರುವ ನೀರಿನ ಪಾಲನ್ನು ಪಡೆಯುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರುವ ತುರ್ತು ಅಗತ್ಯವಿದೆ ಎಂದರು.
ಕರ್ನಾಟಕದಲ್ಲಿರುವ ಬ್ಯಾರೇಜ್‌ಗಳಲ್ಲಿ ನೀರಿನ ಕೊರತೆಯಿದೆ. ಭೀಮಾನದಿ ನೀರನ್ನು ನಂಬಿಕೊಂಡು ಎಡ ಮತ್ತು ಬಲ ದಡದಲ್ಲಿ ರೈತರು ಲಕ್ಷಾಂತರ ಎಕರೆ ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆೆಯುತ್ತಿದ್ದಾರೆ. ಈಗಾಗಲೇ ಬರದ ಗಂಭೀರ ಛಾಯೆ ನಮ್ಮ ಭಾಗದ ಮೇಲೆ ಬಿದ್ದಿದೆ. ಹೀಗಾಗಿ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ.
ಒಂದು ವೇಳೆ ನೀರಿನ ಕೊರತೆಯಾದರೆ ಭಾರಿ ಪ್ರಮಾಣದಲ್ಲಿ ರೈತರಿಗೆ ನಷ್ಟ ಬೀಳಲಿದೆ. ಆದ್ದರಿಂದ ಸರ್ಕಾರ ಮುತುವರ್ಜಿವಹಿಸಿ ವಹಾರಾಷ್ಟ್ರದಿಂದ ನೀರು ಪಡೆಯಲು ತನ್ನ ಪ್ರಯತ್ನ ಆರಂಭಿಸಬೇಕು ಅಂದಾಗ ಮಾತ್ರ ನಮ್ಮ ಬಾಂದಾರ ತುಂಬಲು ಸಾಧ್ಯ ಎಂದರು.
ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ ಪೀಠದ ಭೀಮಾನದಿಯ ನೀರು ಹಂಚಿಕೆಯ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ದುರಂತವೆಂದರೆ ಮಳೆಗಾಲ ದಿನಗಳಲ್ಲಿ ನದಿ ಬತ್ತಿ ಹೋಗಿದ್ದರೂ ಸರ್ಕಾರ ಈ ಭಾಗದ ಜನ ಪ್ರತಿನಿಧಿಗಳು ದಿವ್ಯ ನಿರ್ಲಕ್ಷೃ ವಹಿಸುತ್ತಿದ್ದಾರೆ.
ಅದರಿಂದ ಭೀಮಾನದಿ ತೀರದ ಜನತೆ ಮತ್ತು ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ. ಭೀಮಾನದಿ ಬತ್ತಿ ಹೋಗಿರುವುದರಿಂದ ಹಳ್ಳಿಗಳ ಜನ ಮತ್ತು ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಕೂಡಲೇ ನೀರು ಹರಿಸಲು ಕ್ರಮ ವಹಿಸದೇ ಹೋದರೆ ನಮ್ಮ ಭಾಗದ ಸರಿ ಸುಮಾರು 10 ಸಾವಿರ ರೈತರೊಂದಿಗೆ ಇಂಡಿ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಹೇಶ ಹೂಗಾರ, ರಾಮಸಿಂಗ ಕನ್ನೊಳ್ಳಿ, ವಿಠ್ಠಲ ಸೊನ್ನ, ರಾಜು ಪವಾರ, ಪ್ರೇಮ ಕಾಲೇಬಾಗ, ಅಪ್ಪು ಚಂಡಕೆ, ತೇಜಸ್ ದೊಡ್ಡಮನಿ, ನಾಗರಾಜ ಲಾಳಸೇರಿ, ಬಾಗು ಹೊಸಮನಿ, ಶ್ರೀಧರ ವಡ್ಡಿ, ಪರಶುರಾಮ ಬಂಡಾರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net