ಎಸ್‌ಟಿಗೆ ರಾಯರಾವತ್ ಸಮಾಜ ಸೇರಿಸಲು ಒತ್ತಾಯ

 ಜಿ.ಜಯರಾಂ
ಜಿ.ಜಯರಾಂ
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ರಾಯರಾವತ್ ಸಂಘದ ಅಧ್ಯಕ್ಷ ಜಿ.ಜಯರಾಂ
  • ಸೂಕ್ಷ್ಮಾತಿಸೂಕ್ಷ್ಮ ರಾಯರಾವತ್ ಸಮಾಜ
ಹುಣಸೂರು: ಸೂಕ್ಷ್ಮಾತಿಸೂಕ್ಷ್ಮ ರಾಯರಾವತ್ ಸಮಾಜವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕೆಂದು ತಾಲೂಕು ರಾಯರಾವತ್ ಸಂಘದ ಅಧ್ಯಕ್ಷ ಜಿ.ಜಯರಾಂ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪ್ರವರ್ಗ 1ಕ್ಕೆ ಸೇರುವ 94 ಜಾತಿಗಳಿವೆ. ಈ ಜಾತಿಗಳಲ್ಲಿ ಒಳಜಾತಿ, ಉಪಜಾತಿಗಳನ್ನೊಳಗೊಂಡ ಒಟ್ಟು 380 ಜಾತಿಗಳನ್ನು ಗುರುತಿಸಲಾಗಿದ್ದು, ರಾಜ್ಯ ಸರ್ಕಾರ ಈ ವರ್ಗಕ್ಕೆ ನೀಡಿರುವ ಮೀಸಲಾತಿ ಕೇವಲ ಶೇ.0.4 ಮಾತ್ರ ಆಗಿದೆ. ಇದು ಸಣ್ಣ ಪುಟ್ಟ ಸಮುದಾಯಗಳಿಗೆ ಘೋರ ಅನ್ಯಾಯವಾಗಿದ್ದು, ಮುಖ್ಯವಾಗಿ ರಾಯರಾವತ್ ಸಮುದಾಯ ಈವರೆಗೂ ಯಾವುದೇ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ದೇಶದ ಭೂಸೇನಾ ಮಹಾದಂಡನಾಯಕರಾಗಿದ್ದ ಬಿಪಿನ್ ರಾವತ್‌ರಂತಹ ದಿಗ್ಗಜರು ದೇಶ ಸೇವೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು.
ರಾಯರಾವತ್ ಸಮಾಜದಲ್ಲಿ ಕೃಷಿಕರು ಮತ್ತು ಕುಶಲಕರ್ಮಿಗಳಿದ್ದು, ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಮುದಾಯದ ಗಣತಿಕಾರ್ಯ ನಡೆಸಿ ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಬೇಕೆಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net