ಗೋವನ್ನು ರಾಷ್ಟ್ರಮಾತೆಯನ್ನಾಗಿ ೂಷಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು. ಮುಕ್ತಾನಂದ ಸ್ವಾಮೀಜಿ, ನಿಲೇಶ, ಮಾರುತಿ ಕೋಳಿ, ಚಿದಂಬರ ಕನಕಗಿರಿ, ರಾಜು ಬಾದಾಮಿ ಇತರರಿದ್ದರು.
Published on:
Copied
Follow Us
ಬೆಳಗಾವಿ: ಗೋವನ್ನು ರಾಷ್ಟ್ರಮಾತೆಯನ್ನಾಗಿ ೂಷಿಸಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು.
ಚನ್ನಮ್ಮ ವೃತ್ತದಿಂದ ಗೋವು ಸಮೇತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಆಗಮಿಸಿ ಗೋಮಾತೆ ಅಭಿಮಾನದ ಪ್ರಯುಕ್ತ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಸಂಗ್ರಹಿಸಿದ ಒಟ್ಟು 1.80 ಲಕ್ಷ ಸಹಿ ಸಂಗ್ರಹದ ಪ್ರತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಸವದತ್ತಿ ತಾಲೂಕು ಶಿಂದೋಗಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಒಂದು ಹಂತದ ಅಭಿಯಾನ ಪೂರ್ಣಗೊಂಡಿದೆ. ದೇಶವ್ಯಾಪ್ತಿಯಲ್ಲಿ ಎರಡನೇ ಹಂತದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಗೋ ಮಾತೆ ಅತ್ಯಂತ ಶ್ರೇಷ್ಠ. ಗೋವು ಉಳಿದರೆ ಮಾತ್ರ ಮಾನವಕುಲ ಉಳಿಯುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ, ರಾಷ್ಟ್ರಮಾತೆ ಎಂದು ೂಷಿಸಿ, ಸಂರಕ್ಷಿಸಬೇಕು. ಮೂರನೇ ಹಂತವಾಗಿ 2027ರ ಆಗಸ್ಟ್ನಲ್ಲಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ ಎಂದರು.
ನಿಲೇಶ, ಮಾರುತಿ ಕೋಳಿ, ಆನಂದ ನವಲೆ, ಆನಂದ ಶೆಟ್ಟಿ, ಸುರೇಂದ್ರ ಭಂಡಾರಿ, ಪ್ರಕಾಶ ಲಾಡವ್, ಸೂರಜ್, ಮುಕುಂದ ಅರುಣಕುಮಾರ, ಜಯಶಂಕರ ವಣ್ಣೂರ, ರಾಜು ಬಾದಾಮಿ, ಚಿದಂಬರ ಕನಕಗಿರಿ ಹಾಗೂ ವಿವಿಧ ಹಿಂದೂ ಸಂಟನೆಗಳ ಕಾರ್ಯಕರ್ತರು ಇದ್ದರು.