ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ವಿರೋಧಿಸಿ ಕಾರ್ಮಿಕರು ಕಪು$್ಪಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ$್ಯ ಪೂರ್ವ ಮತ್ತು ನಂತರದ ಸುದೀರ್ಘ ಹೋರಾಟಗಳ ಫಲವಾಗಿ ಕಾರ್ಮಿಕರು ಪಡೆದಿದ್ದ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ಅವುಗಳನ್ನು ಕೇವಲ 4 ಸಂಹಿತೆಗಳಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಬ್ರಿಟಿಷ್ ಕಾಲದ ಶೋಷಣಾತ್ಮಕ ಸ್ಥಿತಿಗೆ ತಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.