ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಪಟ್ಟು

Demand to complete irrigation project work
Demand to complete irrigation project work
Published on
ಪಾವಗಡ: ಭದ್ರ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಗಳ ಕಾಮಗಾರಿ ಶ್ರೀ ಪೂರ್ಣಗೊಳಿಸಿ ತಾಲೂಕಿನ ಕೆರೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂ ಪಟ್ಣಣದ ತಾಪಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ವಾತನಾಡಿ, 15 ವರ್ಷಗಳಿಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ೋಷಿಸಿದೆ. ಇಲ್ಲಿ ಯಾವುದೇ ನೀರಾವರಿ ಮೂಲ ಇಲ್ಲ. ಮಳೆಯಾಶ್ರಿತ ಪ್ರದೇಶವಾಗಿದೆ. ಆದರೆ, ಭದ್ರ ಮೇಲ್ದಂಡೆ ಯೋಜನೆಯಡಿಯಲ್ಲಿ 38 ಕೆರೆಗಳು ಮತ್ತು ಎತ್ತಿನಹೊಳೆ ಯೋಜನೆಯಡಿಯಲ್ಲಿ 25 ಕೆರೆಗಳು ಸೇರಿ ಒಟ್ಟು 63 ಕೆರೆಗಳಿಗೆ ತ್ವರಿತವಾಗಿ ನೀರು ಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.
ತಾಲೂಕಿನಾದ್ಯಂತ ಪ್ರತಿ ವರ್ಷ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದ್ದು, ಕೊಳವೆ ಬಾವಿಗಳನ್ನು ಒಂದು ಸಾವಿರ ಅಡಿ ಕೊರೆದರೂ ನೀರಿಲ್ಲದಂತಾಗಿದೆ ಎಂದು ಬೇಸರಿಸಿದರು. ಮುಖಂಡರಾದ ಶಂಕರ್ ನಾಯ್ಕ ,ಪಾಲನಾಯ್ಕ, ನರಸಿಂಹಪ್ಪ ,ಎನ್ ಸಂಜೀವಪ್ಪ, ಎಚ್.ಕೃಷ್ಣಮೂರ್ತಿ, ದುರ್ಗಪ್ಪ, ಸಿದ್ದಪ್ಪ, ರಾಮಚಂದ್ರಪ್ಪ, ಶ್ರೀರಾಮಪ್ಪ, ಬಾಲು, ಮಂಜುನಾಥ್, ನರೇಶ್, ರಾಮಚಂದ್ರಪ್ಪ, ಹನುಮಂತರಾಯಪ್ಪ, ಗೋಪಾಲ್, ನಡುಪನ್ನ, ಗಂಗಮ್ಮ, ತಿಪ್ಪೇಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net