ಪ್ರಧಾನಿ ರಾಜೀನಾಮೆಗೆ ಒತ್ತಾಯ

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ನವದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಹಲ್ಲೆ ಖಂಡಿಸಿ ಬಸವಕಲ್ಯಾಣದಲ್ಲಿ ಯುವ ಮುಖಂಡ ಅರುಣ ಗಾಯಕವಾಡ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಪತ್ರವನ್ನು ಗ್ರೇಡ್​-2 ತಹಸೀಲ್ದಾರ್​ ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಸಂದೀಪ ಮುಕಿಂದೆ, ಶಂಕರ ಫುಲೆ, ಅಮುಲ್​ ಶಿಂಧೆ, ಹುಸೇನ್​ ಸರ್ಫರಾಜ್​ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನೀಟ್​ ಹಗರಣ ಖಂಡಿಸಿ ಬಸವಕಲ್ಯಾಣದಲ್ಲಿ ಪ್ರತಿಭಟನೆ
ಬಸವಕಲ್ಯಾಣ: ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನವದೆಹಲಿ ಜಂತರ್​ ಮಂತರ್​ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಹಲ್ಲೆ ಖಂಡಿಸಿ ಯುವ ಮುಖಂಡ ಅರುಣ ಗಾಯಕವಾಡ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಡಾ.ಅಂಬೇಡ್ಕರ್​ ವೃತ್ತದ ಬಳಿ ಜಮಾಯಿಸಿದ ಗ್ರಾಮ ಕ್ರಾಂತಿ ಸಂಘ, ಬಿಎಸ್​ಪಿ, ದಲಿತ ಪ್ಯಾಂಥರ್​ ಹಾಗೂ ತೆಹ್ರಿಕ್​-ಎ-ಟಿಪ್ಪು ಸುಲ್ತಾನ್​ ಯುವ ಸಮಿತಿ ಪ್ರಮುಖರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆ ಕುರಿತು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್​&2 ತಹಸೀಲ್ದಾರ್​ ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು.
ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್​ ರಾಜೀನಾಮೆ ನೀಡಬೇಕು. ಉತ್ತಮ ಆಡಳಿತದ ರಕ್ಷಣೆಗಾಗಿ ಭಾರತದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು. ಕಚೇರಿಯ ಸಂಪೂರ್ಣ ಅಧಿಕಾರ ರಾಷ್ಟ್ರಪತಿ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಗ್ರಾಮ ಕ್ರಾಂತಿ ಸಂಘಟನೆ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ, ಬಿಎಸ್​ಪಿ ತಾಲೂಕು ಅಧ್ಯಕ್ಷ ಶಂಕರ ಫುಲೆ, ನಿತ್ಯಾನಂದ ಮಂಠಾಳಕರ್​ ಮಾತನಾಡಿದರು. ದಲಿತ ಪ್ಯಾಂಥರ್​ ನಗರಾಧ್ಯಕ್ಷ ಅಮೂಲ್​ ಶಿಂಧೆ, ತೆಹ್ರಿಕ್​-ಎ-ಟಿಪ್ಪು ಸುಲ್ತಾನ್​ ಯುವ ಸಮಿತಿಯ ಹುಸೇನ್​ ಸರ್ಫರಾಜ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net