ಖಾಲಿ ಹುದ್ದೆ ಭರ್ತಿಗೆ ಆಗ್ರಹ / NELAMANGAL

ನೆಲಮಂಗಲದ ಅಂಬೇಡ್ಕರ್​ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಅರುಂಧತಿ ೇಮಾಭಿವೃದ್ಧಿ ಸಂದ ಅಧ್ಯಕ್ಷ ಕಾರೇಹಳ್ಳಿ ಹನುಮಂತರಾಯಪ್ಪ ಮಾತನಾಡಿದರು. ಸಂದ ಖಜಾಂಚಿ ಹನುಮಂತರಾಯಪ್ಪ, ಉಪಾಧ್ಯಕ್ಷ ಗಂಗರಾಮಯ್ಯ, ರಾಮಚಂದ್ರಮೂರ್ತಿ, ಸಹಕಾರ್ಯದರ್ಶಿ ಹನುಮಂತರಾಜು, ಚಿಕ್ಕಪೂಜಗಯ್ಯ, ಅರುಂಧತಿ ನೌಕರರ ೇಮಾಭಿವೃದ್ಧಿ ಸಂದ ಖಜಾಂಚಿ ಉಮೇಶ್​ ಇದ್ದರು.
ನೆಲಮಂಗಲದ ಅಂಬೇಡ್ಕರ್​ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಅರುಂಧತಿ ೇಮಾಭಿವೃದ್ಧಿ ಸಂದ ಅಧ್ಯಕ್ಷ ಕಾರೇಹಳ್ಳಿ ಹನುಮಂತರಾಯಪ್ಪ ಮಾತನಾಡಿದರು. ಸಂದ ಖಜಾಂಚಿ ಹನುಮಂತರಾಯಪ್ಪ, ಉಪಾಧ್ಯಕ್ಷ ಗಂಗರಾಮಯ್ಯ, ರಾಮಚಂದ್ರಮೂರ್ತಿ, ಸಹಕಾರ್ಯದರ್ಶಿ ಹನುಮಂತರಾಜು, ಚಿಕ್ಕಪೂಜಗಯ್ಯ, ಅರುಂಧತಿ ನೌಕರರ ೇಮಾಭಿವೃದ್ಧಿ ಸಂದ ಖಜಾಂಚಿ ಉಮೇಶ್​ ಇದ್ದರು.
Published on
ನೆಲಮಂಗಲ : ಗ್ರೂಪ್​ ಎ ವರ್ಗಕ್ಕೆ ಶೇ.6 ಒಳಮೀಸಲಾತಿ ನೀಡಿದ ಬಳಿಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ರಾಜ್ಯ ಅರುಂಧತಿ ೇಮಾಭಿವೃದ್ಧಿ ಸಂದ ಅಧ್ಯಕ್ಷ ಕಾರೇಹಳ್ಳಿ ಹನುಮಂತರಾಯಪ್ಪ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಅಂಬೇಡ್ಕರ್​ ಭವನದಲ್ಲಿ ಶುಕ್ರವಾರ ರಾಜ್ಯ ಅರುಂಧತಿ ೇಮಾಭಿವೃದ್ಧಿ ಸಂ ಹಾಗೂ ಅರುಂಧತಿ ನೌಕರರ ೇಮಾಭಿವೃದ್ಧಿ ಸಂ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಯೋಜಿಸಿದ್ದ ಕಳೆದ 35 ವರ್ಷದಿಂದಲೂ ಸಮಾಜದ ಎಲ್ಲ ೇತ್ರಗಳಲ್ಲೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಆಳುವ ಸರ್ಕಾರಗಳಿಗೆ ನ್ಯಾಯ ಒದಗಿಸುವಂತೆ ಹೋರಾಟಗಳ ಮೂಲಕ ಮನವಿ ಮಾಡುವ ನಿರಂತರ ಕೆಲಸ ಮಾಡಲಾಗುತ್ತಿದೆ. ಕೆಲ ಸರ್ಕಾರಗಳು ಸಮುದಾಯವನ್ನು ಕಡೆಗಣಿಸಿದರೆ, ಕೆಲ ಸರ್ಕಾರಗಳು ಸಮುದಾಯದತ್ತ ಗಮನಹರಿಸಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗಗಳನ್ನು ರಚನೆ ಮಾಡಿ ವರದಿ ತರಿಸಿಕೊಳ್ಳುವುದಕ್ಕೆ ಸೀಮಿತವಾಗಿವೆ ಎಂದರು.
ಕಳೆದ ಮಾ.27 ರಂದು ಸಚಿವ ಸಂಪುಟ ಕರೆದು ಒಳಮೀಸಲಾತಿ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಬೇಕಿತ್ತು. ಆದರೆ, ಚುನಾವಣೆಯ ಕುಂಟು ನೆಪಹೇಳಿ ಸರ್ಕಾರ ಸಭೆಯನ್ನು ಮುಂದೂಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾದಿಗ ಸಮಯದಾಯದ ಶೇ.5 ಮೀಸಲಾತಿಯಲ್ಲಿ ಯಾವುದೇ ಹೋರಾಟ ಮಾಡದ, ಮೇಲ್ವರ್ಗದ ಜನರೊಂದಿಗೆ ಇರುವ ಬೋವಿ ಲಮಾಣಿ, ಕೊರಮ ಕೊರಚ ಅನ್ನುವ ಸಮುದಾಯಗಳಿಗೂ ಶೇ.6 ಮೀಸಲಾತಿ ಕಲ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಎಚ್ಚರಿಕೆ: ಶತಮಾನಗಳಿಂದಲೂ ಮಾದಿಗ ಸಮುದಾಯ ತುಳಿತಕ್ಕೆ ಒಳಗಾಗಿದೆ. ಅದರಲ್ಲೂ ಎಡಗೈ ಸಮುದಾಯ ಎಲ್ಲ ೇತ್ರಗಳಲ್ಲೂ ಹಿಂದೆ ಬಿದ್ದಿದೆ. ಇತರರಂತೆ ಮಾದಿಗ (ಎಡಗೈ) ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅನಿವಾರ್ಯತೆ ಇದೆ, ಸರ್ಕಾರ ಮಾದಿಗ ಸಮುದಾಯದ ಓಲಮೀಸಲಾತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯಬೇಕಾಗಲಿದೆ. ಕರ್ನಾಟಕದಲ್ಲಿ ಮಾತ್ರ ಲಮಾಣಿ ಸಮುದಾಯ ಪರಿಶಿಷ್ಟ ವರ್ಗದ ಜತೆಗೆ ಸೇರ್ಪಡೆಯಾಗಿದೆ, ದೇಶದ ಉಳಿದ ಯಾವುದೇ ರಾಜ್ಯದಲೂ ಪರಿಶಿಷ್ಟ ವರ್ಗದ ಜತೆಗಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ವೆಂಕಟಾಚಲಯ್ಯ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net