ಬರ ಪರಿಹಾರ ಘೋಷಣೆಗೆ ಆಗ್ರಹ

ಬರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿ ಶುಕ್ರವಾರ ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಯಾದಗಿರಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಭೀಮನಗೌಡ ದದ್ದಲ್, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಹಿರೇಮಠ, ರಾಘವೇಂದ್ರ ಕಾಮನಟಗಿ, ಯಲ್ಲಪ್ಪ ನಾಯಕ ವನದುರ್ಗ, ಸಾಯಿಬಣ್ಣ ಬಸವಂತಪುರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು
  • ಸರ್ಕಾರ ಕೂಡಲೇ ಬರ ಪರಿಹಾರ ಘೋಷಣೆ ಮಾಡಬೇಕು !
ಯಾದಗಿರಿ :

ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬರ ಪರಿಹಾರ ಘೋಷಣೆ ಮಾಡಬೇಕು ಎಂದು ಭಾರತೀಯ ಕಿಸಾನ ಸಂಘ ಜಿ¯್ಲÁ ಘಟಕದ ಮುಖಂಡರು ಜಿ¯್ಲÁಽಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೃಷ್ಣಾ ಹಾಗೂ ಭೀಮಾ ನದಿ ಇದ್ದರೂ ಈ ವರ್ಷ ಬೆಳೆಗಳಿಗೆ ನೀರು ಸಿಕ್ಕಿಲ್ಲ. ಸುರಪುರ, ಶಹಾಪುರ, ವಡಗೇರಾ, ಹುಣಸಗಿ ಸೇರಿ ಅನೇಕ ಕಡೆಗಳಲ್ಲಿ ಬಿತ್ತನೆಯಾದ ಹೆಸರು, ಸಜ್ಜೆ, ಹತ್ತಿ, ಸೂರ್ಯಕಾಂತಿ ಬೆಳೆಗಳಿಗೆ ಮಳೆ ಇಲ್ಲದೆ ಹಾನಿಯಾಗಿವೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಬೆಳೆ ಹಾನಿಯ ಸಮೀಕ್ಷೆ ಮಾಡಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಹೈನುಗಾರಿಕೆ ಮಾಡುವ ರೈತರ ಕುಟುಂಬಗಳಿಗೆ ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹಧನ ಕೊಡಬೇಕು ಎಂದು ಕೋರಿದರು. ಜಿ¯್ಲÁಽಕಾರಿ ಕಚೇರಿಯ ಅಽಕಾರಿಯೊಬ್ಬರಿಗೆ ಮನವಿಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಜಿ¯್ಲÁ ಘಟಕದ ಅಧ್ಯಕ್ಷ ಭೀಮನಗೌಡ ದದ್ದಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗ ಸ್ವಾಮಿ ಹಿರೇಮಠ, ರಾಜ್ಯ ಪದಾಽಕಾರಿಗಳಾದ ರಾಘವೇಂದ್ರ ಕಾಮನಟಗಿ, ಯಲ್ಲಯ್ಯ ನಾಯಕ, ಸದಸ್ಯರಾದ ಮಲ್ಲಿಕಾರ್ಜುನ ಹಳಗೇರಿ, ಭೀಮರಾಯ ಜಂಗಳಿಗೌಡರು, ಸಾಯಿಬಣ್ಣ ಬಸವಂತಪುರ, ಭೋಜಪ್ಪ ಮಗ್ಗಾ, ನಾಗಪ್ಪ ಗಚ್ಚಿನಮನಿ, ರಾಚಯ್ಯಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net