ರೆತರಿಗೆ ನಿರಂತರ ವಿದ್ಯುತ್​ ಪೂರೆಕೆಗೆ ಪಟ್ಟು

Demand for continuous power supply to farmers
Demand for continuous power supply to farmers
Published on
ಕುಣಿಗಲ್​: ರೆತರಿಗೆ ನಿರಂತರ ವಿದ್ಯುತ್​ ಪೂರೆಕೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ಬೆಸ್ಕಾಂ ಕಾರ್ಯಪಾಲಕ ಕಚೇರಿ ಮುಂದೆ ರಾಜ್ಯ ರೆತ ಸಂ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೆತ ಸಂ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯ ಆನಂದ್​ ಪಟೇಲ್​ ಹುಲಿಕಟ್ಟೆ ಮಾತನಾಡಿ, ಬೆಳೆಗಳಿಗೆ ವೆಜ್ಞಾನಿಕ ಬೆಲೆ ರೂಪಿಸಿ ದಿನದ 24 ಗಂಟೆ ಸಮರ್ಪಕವಾಗಿ ವಿದ್ಯುತ್​ ಪೂರೆಸುವಂತೆ ಆಗ್ರಹಿಸಿದರು.
ರೆತರಿಗೆ ವಿದ್ಯುತ್​ ನೀಡದೆ ಸರ್ಕಾರ ಹಾಗೂ ಬೆಸ್ಕಾಂ ಇಲಾಖೆಯು ಅನ್ಯಾಯ ಮಾಡುತ್ತಿದೆ. ಅನ್ನದಾತನಿಗೆ ಕೇವಲ ಏಳು ಗಂಟೆ ವಿದ್ಯುತ್​ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾ ಸರ್ಕಾರ ಮೋಸ ಮಾಡುತ್ತಿದೆ. ಅಡಿಕೆ, ತೆಂಗು ಬಾಳೆಗೆ ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಸರ್ಕಾರ ರೆತರ ನೆರವಿಗೆ ಧಾವಿಸಬೇಕೆಂದರು.
ತಾಲೂಕು ಅಧ್ಯ ಅನಿಲ್​ ಕುಮಾರ್​ ಮಾತನಾಡಿ, ಬೇಸಿಗೆಯಲ್ಲಿ ಬೆಳೆಗಳು ಒಣಗಿ ನಷ್ಟವಾಗುತ್ತಿದೆ. ಸಾವಿರ ಅಡಿ ಬೋರ್​ ಕೊರೆದರೂ ನೀರು ಬರುತ್ತಿಲ್ಲ. ಗೊಬ್ಬರ ಔಷಧ, ನೀರು ಸಕಾಲಕ್ಕೆ ದೊರೆಯದೆ ಸಮಸ್ಯೆಯಿಂದ ಅನ್ನದಾತ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಬೆಸ್ಕಾಂ ಕಾರ್ಯ ಪಾಲಕ ಅಭಿಯಂತರ ಪುರುಷೋತ್ತಮ್​ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ರೆತರಿಗೆ ಏಳು ತಾಸು ವಿದ್ಯುತ್​ ನೀಡಲು ಸಾಧ್ಯವಾಗುತ್ತಿಲ್ಲ. ಕೇವಲ ಆರು ಗಂಟೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹುಲಿಯೂರುದುರ್ಗ ಸೇರಿದಂತೆ ಐದು ಕಡೆ ವಿದ್ಯುತ್​ ಸರ್ವಿಸ್​ ಸ್ಟೇಷನ್​ಗಳನ್ನು ನಿರ್ಮಿಸಲು ಈಗಾಗಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಬೇಸಿಗೆಯಲ್ಲಿ ಗಂಗಾ ಕಲ್ಯಾಣ, ಜೆಜೆಎಂ ಯೋಜನೆಯ ನೀರಾವರಿಗಳಿಗೆ ಮತ್ತು ಹೆಚ್ಚು ಬೋರ್​ವೆಲ್​ ಕೊರೆಸಿರುವುದರಿಂದ ವಿದ್ಯುತ್​ ಬೇಡಿಕೆ ಹೆಚ್ಚಾಗಿದೆ. ಕೂಡಲೇ ಕ್ರಮ ಕೆಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಟ್ಟರು. ಅಮತೂರು, ಹುಲಿಯೂರುದುರ್ಗ, ಪುತ್ರಿ ಕೊತ್ತಗೆರೆ ಸೇರಿದಂತೆ ತಾಲೂಕಿನ ವಿವಿಧ ಹೋಬಳಿಯಿಂದ ರೆತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net