ಕೇವಲ ಜನರಿಗಷ್ಟೇ ಅಲ್ಲದೆ ಹಳೆಯ ಬಸ್ ನಿಲ್ದಾಣ ಪ್ರದೇಶದ ಹಲವು ಹೋಟೆಲ್ಗಳಿಗೂ ಈ ಬಾವಿ ನೀರು ಆಸರೆಯಾಗಿತ್ತು. ಅಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಏಕೈಕ ಬಾವಿ ಇದೀಗ ಪಾಚಿ ತುಂಬಿ ಮಲಿನವಾಗುತ್ತಿದ್ದು, ಜನರು ಈ ನೀರನ್ನು ತಮ್ಮ ಮನೆಗಳಿಗೆ ಹೊತ್ತೊಯ್ಯತಿರುವುದರಿಂದ ಮುಂಬರುವ ದಿನಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.