ಕೊಳ್ಳೇಗಾಲದಲ್ಲಿ ಕರ್ನಾಟಕ ರಾಜ್ಯ ಹುಲಿ ಸೇನೆ ಪದಾಧಿಕಾರಿಗಳು ಆರ್‌ಆರ್‌ಟಿ ವಿಭಾಗ ಶಿರಸ್ತೇದಾರ್ ರಾಹುಲ್ ಚಂದ್ರ ಗೌತಮ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಚ್.ಅವಿನಾಶ್, ಜಸ್ವಂತ್ ಶೃಂಗಾರ್, ಶಾಶ್ವತ್‌ಗೌಡ, ಸಿ.ಕೃಷ್ಣ ಇದ್ದರು.
ಆನ್‌ಲೈನ್ ಗೇಮ್‌ಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಆಗ್ರಹಿಸಿ
ಕರ್ನಾಟಕ ರಾಜ್ಯ ಹುಲಿ ಸೇನೆ ಪದಾಧಿಕಾರಿಗಳು
ಕೊಳ್ಳೇಗಾಲ:
ಆನ್‌ಲೈನ್ ಗೇಮ್‌ಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹುಲಿ ಸೇನೆ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶದ ಯುವಪೀಳಿಗೆ ಆನ್‌ಲೈನ್ ಗೇಮ್‌ಗಳ ಗೀಳಿಗೆ ಬಿದ್ದು ಜೀವ-ಜೀವನ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಪರಿಸ್ಥಿತಿಯನ್ನು ಗಮನಿಸಿ ಸಮಾಜದ ಒಳಿತಿಗಾಗಿ ಹಾಗೂ ದೇಶದ ಸುಭದ್ರತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಷ್ಟೋ ಜನ ಯುವಕ-ಯುವತಿಯರು ಸಾಲದ ಸುಳಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಚ್.ಅವಿನಾಶ್, ರಾಜ್ಯ ಉಪಾಧ್ಯಕ್ಷ ಜಸ್ವಂತ್ ಶೃಂಗಾರ್, ಚಾಮರಾಜನಗರ ಜಿಲ್ಲಾ ಸಂಚಾಲಕ ಶಾಶ್ವತ್‌ಗೌಡ, ತಾಲೂಕು ಸದಸ್ಯ ಸಿ.ಕೃಷ್ಣ ಇದ್ದರು.