ತಹಸೀಲ್ದಾರ್​ ವಿರುದ್ಧ ಕ್ರಮಕ್ಕೆ ಪಟ್ಟು

Demand for action against the Tahsildar
Demand for action against the Tahsildar
Published on
ಮಧುಗಿರಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಬಾಬು ಜಗಜೀವನ ರಾಮ್​ ಜಯಂತಿಯ ಪೂರ್ವಭಾವಿ ಸಭೆ ಮತ್ತು ಜಯಂತಿಗೆ ತಹಸೀಲ್ದಾರ್​ ಗೈರಾಗುವುದನ್ನು ಖಂಡಿಸಿ, ಅವರನ್ನು ಅಮಾನತು ಮಾಡುವಂತೆ ದಲಿತಪರ ಸಂಘಟನೆಗಳ ಮುಖಂಡರು ಭಾನುವಾರ ಉಪವಿಭಾಗಾಧಿಕಾರಿ ಗುಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ದಲಿತಪರ ಸಂಘಟನೆಯಿಂದ ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಾಬು ಜಗಜೀವನ ರಾಮ್​ ಜಯಂತಿ ಆಚರಿಸಿದರು. ಮುಖಂಡರಾದ ನರಸಿಂಹಮೂರ್ತಿ, ತೊಂಡೋಟಿ ರಾಮಾಂಜಿನಪ್ಪ, ಎಂ.ವೈ.ಶಿವಕುಮಾರ್​, ಬಾಣದ ರಂಗಯ್ಯ, ನರಸಿಯಪ್ಪ, ಎಸ್​.ಕೆ. ರಂಗನಾಥ್​, ಹನುಮಂತರಾಯಪ್ಪ, ಮರಿಯಪ್ಪ, ದೊಡ್ಡೇರಿ ರಮೇಶ್​, ದಾಸಪ್ಪ, ಚಿಕ್ಕಮ್ಮ, ರಾಜು, ಹರಿ ಗಣೇಶ್​, ಗರಣಿ ರಂಗರಾಜು, ರಂಗನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net