ರೈತರಿಗೆ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಪಟ್ಟು
Demand action against those who threatened the lives of farmers
Published on:
Copied
Follow Us
ಶಿಡ್ಲಘಟ್ಟ: ಅಮಾಯಕ ರೈತರಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿಪಿಐ ಆನಂದ್ಕುಮಾರ್ ಮೂಲಕ ಗೃಹ ಸಚಿವರಿಗೆ ಕೆಐಎಡಿಬಿ ಜಮೀನುಗಳ ಪರ ರೈತರ ಹೋರಾಟ ಸಮಿತಿ ಮುಖಂಡರು ಮಂಗಳವಾರ ಮನವಿ ರವಾನಿಸಿದರು.
ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಜಮೀನು ನೀಡಲು ಸಿದ್ಧರಿರುವ ರೈತರಿಗೆ ಕೆಲವರು ಕೈಕಾಲು ಮುರಿಯುವುದಾಗಿ ಹಾಗೂ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ.
ಯಣ್ಣಂಗೂರು ಗ್ರಾಮದ ಪ್ರದಿಪ್ ಅವರು ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದರೆ ಉತ್ತಮ ಪರಿಹಾರ ಸಿಗುತ್ತದೆ ಎಂದಿದ್ದಕ್ಕೆ ದೂರವಾಣಿ ಮೂಲಕ ಕೈಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುವುದು, ನಡಿಪಿನಾಯಕನಹಳ್ಳಿ ರೈತ ಚನ್ನಕೃಷ್ಣಪ್ಪ ಅವರು ಜಮೀನು ಅಳತೆ ಮಾಡಿಸುವಾಗ ಗುಂಪೊಂದು ಬಂದು ಹಲ್ಲೆ ನಡೆಸಿದ್ದು, ಬಸವಾಪಟ್ಟಣ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಬಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿ ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ರೈತರ ಸೋಗಿನಲ್ಲಿ ಪೊಲೀಸರ ಕೊರಳುಪಟ್ಟಿ ಹಿಡಿದು ದೌರ್ಜನ್ಯ ಎಸಗಿರುವ ಆರೋಪಿಗಳ ಮೇಲೆ ಕೂಡಲೇ ಕ್ರಮ ಜರುಗಿಸುವ ಜತೆಗೆ ಸರ್ಕಾರಕ್ಕೆ ಭೂಮಿ ನೀಡಲು ಮುಂದಾಗಿರುವ ರೈತರಿಗೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.