ಮನೆ&ಮನೆಗೂ ಸಮರ್ಪಕ ನೀರು ತಲುಪಿಸಿ water

ಮನೆ&ಮನೆಗೂ ಸಮರ್ಪಕ ನೀರು ತಲುಪಿಸಿ water
ಮನೆ&ಮನೆಗೂ ಸಮರ್ಪಕ ನೀರು ತಲುಪಿಸಿ water
Published on
ಬಂಗಾರಪೇಟೆ: ಬೇಸಿಗೆಯಲ್ಲಿ ಉದ್ಬವಿಸಬಹುದಾದ ನೀರಿನ ಅಭಾವ ಎದುರಿಸಲು ಪ್ರತಿಯೋಬ್ಬರೂ ಸಿದ್ಧರಾಗಬೇಕು. ಪ್ರತಿ ಮನೆಗೂ ಸಮರ್ಪಕ ನೀರು ತಲುಪಿಸುವ ಕೆಲಸ ಮಾಡಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿ ಎಚ್​.ರವಿಕುಮಾರ್​ ಹೇಳಿದರು.water
ತಾಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಅದಾಲತ್​ ಕಾರ್ಯಕ್ರಮದಲ್ಲಿ ಮಾತನಾಡಿ, ನೀರಿನ ಮೂಲಗಳಾದ ಟ್ಯಾಂಕ್​ ಮತ್ತು ಕೊಳವೆಬಾವಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಹಾಗೂ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕುಡಿಯಲು ಮತ್ತು ಅಡುಗೆಗೆ ಮಾತ್ರ ಶುದ್ಧ ನೀರನ್ನು ಬಳಸಿ. ಅನಗತ್ಯವಾಗಿ ನಲ್ಲಿ ಆನ್​ ಮಾಡಬಾರದು. ರಸ್ತೆಗಳಿಗೆ ನೀರು ಹಾಕುವುದು, ವಾಹನ ತೊಳೆಯುವುದು ಮತ್ತು ತೋಟಗಳಿಗೆ ಹರಿಸುವುದನ್ನು ಕಡ್ಡಾಯವಾಗಿ ನಿಲ್ಲಿಸಿ, ನಲ್ಲಿಗಳಲ್ಲಿ ಅಥವಾ ಪೈಪ್​ಲೈನ್​ಗಳಲ್ಲಿ ಸೋರಿಕೆ ಕಂಡುಬಂದಲ್ಲಿ ತಕ್ಷಣ ಗ್ರಾಮ ಪಂಚಾಯಿತಿಗೆ ದೂರು ನೀಡಿ ದುರಸ್ತಿ ಮಾಡಿಸಿ, ಪಾತ್ರೆ ತೊಳೆದ ಅಥವಾ ತರಕಾರಿ ತೊಳೆದ ನೀರನ್ನು ಗಿಡಗಳಿಗೆ ಬಳಸುವ ಮೂಲಕ ನೀರಿನ ಉಳಿತಾಯ ಮಾಡಿ ಎಂದು ಹೇಳಿದರು.
ನೀರನ್ನು ಮುಚ್ಚಿದ ಪಾತ್ರೆಗಳಲ್ಲಿ ಶೇಖರಿಸಿ. ಸಾಧ್ಯವಾದಷ್ಟು ನೀರನ್ನು ಕಾಯಿಸಿ ಆರಿಸಿ ಕುಡಿಯಿರಿ. ನಿಮ್ಮ ವಾರ್ಡ್​ನಲ್ಲಿ ನೀರಿನ ಸಮಸ್ಯೆ ಎದುರಾದರೆ ಪಂಚಾಯಿತಿ ಸಹಾಯವಾಣಿಗೆ ಕರೆ ಮಾಡಿ, ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ಕಾಲರಾ, ಅತಿಸಾರ ಭೇದಿಯಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅಂಥ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿ ಶ್ವೇತಾ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುನಿರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net