ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ ಕೆಇಎಗೆ ಭೇಟಿ

ತರಬೇತಿ ನಿರತ ಐಎಎಸ್ ಅಧಿಕಾರಿಗಳ ತಂಡವು ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆಯಿತು.
ತರಬೇತಿ ನಿರತ ಐಎಎಸ್ ಅಧಿಕಾರಿಗಳ ತಂಡವು ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆಯಿತು.
Published on

ಬೆಂಗಳೂರು:ಮುಸ್ಸೂರಿಯನಾಗರಿಕ ಸೇವಾ ಅಧಿಕಾರಿಗಳ ತರಬೇತಿಸಂಸ್ಥೆಯಾದ ಲಾಲ್ ಬಹದ್ದೂರ್ಶಾಸ್ತ್ರಿ ರಾಷ್ಟ್ರೀಯ ಆಡಳಿತಅಕಾಡೆಮಿಯಲ್ಲಿ ತರಬೇತಿ ನಿರತ10 ಐಎಎಸ್ಅಧಿಕಾರಿಗಳ ತಂಡವು ಶುಕ್ರವಾರಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ)ಭೇಟಿ ನೀಡಿ,ಕಾರ್ಯಾಚರಣೆಯಬಗ್ಗೆ ಮಾಹಿತಿ ಪಡೆಯಿತು.

ಅಧಿಕಾರಿಗಳನ್ನುಸ್ವಾಗತಿಸಿದ ಪ್ರಾಧಿಕಾರದಆಡಳಿತಾಧಿಕಾರಿ ಇಸ್ಲಾವುದ್ದೀನ್ಗದ್ಯಾಳ ಕೆಇಎ ಕಾರ್ಯವೈಖರಿ ಬಗ್ಗೆಮಾಹಿತಿ ನೀಡಿದರು.ವಿವಿಧ ವೃತ್ತಿಪರಕೋರ್ಸ್‌ಗಳ ಪ್ರವೇಶಕ್ಕೆ ಪ್ರಾಧಿಕಾರನಡೆಸುವ ಸಿಇಟಿ ಪರೀಕ್ಷೆ ಮತ್ತುಕೌನ್ಸೆಲಿಂಗ್ ಪ್ರಕ್ರಿಯೆ ಹಾಗೂವಿವಿಧ ಹುದ್ದೆಗಳ ನೇಮಕಾತಿಗೆನಡೆಸುವ ಪರೀಕ್ಷೆಗಳಿಗೆ ಅನುಸರಿಸುವಕ್ರಮಗಳ ಕುರಿತು ವಿವರಿಸಿದರು.

ಇದೇವೇಳೆ, ಸಿಇಟಿಅಳವಡಿಸಿಕೊಂಡಿರುವ ಆಧುನಿಕಭದ್ರತಾ ಕ್ರಮಗಳಾದ ಮುಖಚಹರೆಪತ್ತೆ ತಂತ್ರಜ್ಞಾನ,ಪರೀಕ್ಷೆ ಮುಗಿದತಕ್ಷಣವೇ ಓಎಂಆರ್ ಶೀಟ್ ಸ್ಕ್ಯಾನ್ಮಾಡಿ ವೆಬ್ ಸೈಟ್‌ಗೆ ಅಪ್ ಲೋಡ್ಮಾಡುವ ಕ್ರಮದ ಬಗ್ಗೆ ಅಧಿಕಾರಿಗಳುಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆನವೀಕೃತ ಕೆಇಎ ಕಚೇರಿ ಪಡಿಸಿರುವಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದಅಧಿಕಾರಿಗಳು,ಪರೀಕ್ಷೆಗಳಫಲಿತಾಂಶವನ್ನು ಸಕಾಲದಲ್ಲಿನೀಡಲು ಅನುಸರಿಸುವ ಕ್ರಮದ ಬಗ್ಗೆಯೂಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net