ಕೋರಮಂಗಲ, ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿನ ತೀವ್ರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಫ್ಲೈಓವರ್ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದಾಗ ಇದರ ವೆಚ್ಚ 203.20 ಕೋಟಿ ಆಗಿತ್ತು. ನಿಯಮದ ಪ್ರಕಾರ ನವೆಂಬರ್ 4, 2019 ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ನಿರಂತರ ವಿಳಂಬ ಮತ್ತು ಮರು-ಟೆಂಡರ್ ಪ್ರಕ್ರಿಯೆಗಳಿಂದಾಗಿ ಯೋಜನೆಯ ಒಟ್ಟು ವೆಚ್ಚ ಇಂದು ಬರೋಬ್ಬರಿ ರೂ. 1,761 ಕೋಟಿಗಿಂತಲೂ ಅಧಿಕ ಮೊತ್ತಕ್ಕೆ ಬಂದು ತಲುಪಿದೆ, (ಏಜೆನ್ಸೀಸ್).