ಯಾದಗಿರಿ : ನಗರದ ನಿವಾಸಿಯೊಬ್ಬರ ಜಾಗ ಸ್ವಾಽÃನಪಡಿಸಿಕೊಂಡು ಪರಿಹಾರ ನೀಡದ ನಗರಸಭೆ ಕಚೇರಿಯ ವಿವಿಧ ಸಾಮಾನುಗಳನ್ನು ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶದಂತೆ ಮಂಗಳವಾರ ಜಪ್ತಿ ಮಾಡಲಾಗಿದೆ.
ಕಂಪ್ಯೂಟರ್, ಸಿಸಿ ಟಿವಿ, ಕ್ಯಾಮರಾ, ಟೇಬಲï ಕುರ್ಚಿ ಇತರ ಪೀಠೋಪಕರಣಗಳನ್ನು ಕೋರ್ಟ್ ಸಿಬ್ಬಂದಿ ವಶಪಡಿಸಿಕೊಂಡು ಲಾರಿಯಲ್ಲಿ ಕೊಂಡೊಯ್ದರು. ನಗರದ ನಿವಾಸಿ ಸರಸ್ವತಿ ನಾರಾಯಣರಾವ ಅವರ ಜÁಗವನ್ನು ೪೦ ವರ್ಷ ಹಿಂದೆ ನಗರಸಭೆ ತನ್ನದೆಂದು ಸ್ವಾಽÃನ ಮಾಡಿಕೊಂಡು ಪರಿಹಾರವಾಗಿ ಒಂದಿಷ್ಟು ಹಣ ನೀಡಿತ್ತು.
ಬಾಕಿ ಪರಿಹಾರ ಕೋರಿ ಸರಸ್ವತಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಲಯ, ೨.೧೨ ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಲ್ಲದೆ ಹಣ ಕೊಡದಿದ್ದರೆ ಕಚೇರಿ ಸಾಮಗ್ರಿ ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲ್ಲೆಯಲ್ಲಿ ಸೋಮವಾರವೇ ಲಾರಿಸಮೇತ ಜಪ್ತಿಗೆ ಬಂದಿದ್ದ ಕೋರ್ಟ್ ಸಿಬ್ಬಂದಿಗೆ ಪೌರಾಯುಕ್ತ ಉಮೇಶ ಚವ್ಹಾಣ್ ಅವರು ಎಸ್‌ಐಆರ್ ಕೆಲಸ ನಡೆದಿದ್ದು, ದಾಖಲೆಗಳು ಕಂಪ್ಯೂಟರ್‌ಗಳಲ್ಲಿವೆ. ಸಮಯ ನೀಡಿ ಎಂದು ಕೋರಿದ್ದಕ್ಕೆ ವಾಪಸ್ ತೆರಳಿದ್ದರು. ಮಂಗಳವಾರ ಬೆಳಗ್ಗೆ ಬಂದು ಸಾಮಾನುಗಳನ್ನು ಜಪ್ತಿ ಮಾಡಿದರು.
ಮಹತ್ವದ ಸಾಮಾನುಗಳ ಜಪ್ತಿ ಹಿನ್ನೆಲೆಯಲ್ಲಿ ನಗರಸಭೆ ಖಾಲಿ-ಖಾಲಿ ಕಾಣಿಸುತ್ತಿದೆ. ಸಿಬ್ಬಂದಿ ಕೆಲ ಹೊತ್ತು ಗಾಬರಿಗೆ ಬಿದ್ದಂತೆ ಕಂಡಿತು. ಈ ಬಗ್ಗೆ ಅರಿಯದ ಸಾರ್ವಜನಿಕರು ಲಾರಿಯಲ್ಲಿ ಸಾಮಾನುಗಳನ್ನು ಎತ್ತಿ ಹಾಕಿದ್ದನ್ನು ಗಮನಿಸಿ ಏನಾಗಿದೆ ಎಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು.
"
ನ್ಯಾಯಾಲಯದ ಆದೇಶದಂತೆ ಸರಸ್ವತಿ ಅವರಿಗೆ ಪರಿಹಾರ ನೀಡಬೇಕಿತ್ತು. ಆದರೆ ಏಕಕಾಲಕ್ಕೆ ಅಷ್ಟೋಂದು ಹಣ ಕೊಡಲು ನಗರಸಭೆ ಬಳಿ ಹಣ ಇಲ್ಲ. ಹಂತ-ಹAತವಾಗಿ ಕೊಡುವುದಾಗಿ ಹೇಳಿದ್ದೆವು. ಮೊದಲು ೨೦ ಲಕ್ಷ ರೂ. ಕೊಟ್ಟಿದ್ದು, ಈಗ ಐದು ಲಕ್ಷ ರೂ. ಕೊಡುವುದಾಗಿ ಹೇಳಿದ್ದೆವು. ಆದರೆ ಅವರು ಒಪ್ಪದಿದ್ದರಿಂದ ನ್ಯಾಯಾಲಯದ ಆದೇಶದಂತೆ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.| ಉಮೇಶ ಚವ್ಹಾಣ್ನಗರಸಭೆ ಪೌರಾಯುಕ್ತ
"
ನಾಲ್ಕು ದಶಕದ ಹಿಂದೆ ಸ್ಪೇಷನ್ ರಸ್ತೆ ಬಳಿ ಇದ್ದ ನನ್ನ ಜಾಗವನ್ನು ನಗರಸಭೆ ತನ್ನದು ಎಂದುಕೊAಡು ಬಡವರಿಗೆ ಹಂಚಿಕೆ ಮಾಡಿತ್ತು. ಈ ಸಂಬAಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ. ಕಳೆದುಕೊಂಡ ಜÁಗಕ್ಕೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಜಿಲ್ಲಾ ನ್ಯಾಯಾಲಯ ಆದೇಶದಂತೆ ಈಗ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.| ಸರಸ್ವತಿ ನಾರಾಯಣರಾವಯಾದಗಿರಿ ನಿವಾಸಿ