ತಾಲೂಕಿನ ಚೇಳೂರು ಗ್ರಾಮದ ಎರಡನೇ ಬ್ಲಾಕ್ನಲ್ಲಿ ಜಿಂಕೆಯೊಂದು ಬೆಳಗ್ಗೆಯಿಂದ ಆಹಾರ ಅರಸಿ ಅಲೆದಾಡುತ್ತಿತ್ತು. ಜಿಂಕೆಯನ್ನು ಕಂಡ ನಾಯಿಗಳು ದಾಳಿ ಮಾಡಲು ಮುಂಗಾಗಿವೆ. ತಕ್ಷಣೆ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಕಟ್ಟಿಹಾಕಿದ್ದಾರೆ. ನಂತರ ಚೇಳೂರು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚೇಳೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜಿಂಕೆ ವಶಕ್ಕೆ ಪಡೆದಿದ್ದಾರೆ.