ಬೀದಿನಾಯಿಗಳ ದಾಳಿಯಿಂದ ಜಿಂಕೆ ಸಾವು

ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆ.
Published on

ಪ್ರಮುಖ ಮುಖ್ಯಾಂಶಗಳು

  • ಬೇಗೂರು ಗ್ರಾಮದ ಹೊರವಲಯ
  • ಬೀದಿನಾಯಿಗಳ ದಾಳಿ
ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದ ಹೊರವಲಯದಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಜಿಂಕೆ ಮೃತಪಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಿನಿಂದ ಆಹಾರ ಅರಸಿ ಹೊರಬಂದಿದ್ದ ಗಂಡು ಜಿಂಕೆ ಮೇಲೆ ಬೀದಿನಾಯಿಗಳು ದಾಳಿ ನಡೆಸಿತ್ತು. ಪರಿಣಾಮ ಜಿಂಕೆ ತೀವ್ರವಾಗಿ ಗಾಯಗೊಂಡು ಕೆರೆಯ ಸಮೀಪ ಮೃತಪಟ್ಟಿದೆ.
ವಿಷಯ ತಿಳಿದ ಕೂಡಲೇ ಬಫರ್ ವಲಯದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಸುಟ್ಟುಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net