ಜೇವರ್ಗಿ ತಾಲೂಕು ಶ್ರೀಕ್ಷೇತ್ರ ರಾಸಣಗಿ ಬಲಭೀಮಸೇನ ದೇವವರಿಗೆ ಸೋಮವಾರ ಸಮರ್ಪಿಸಿದ ಚಮ್ಮಾವುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಂಟೆಪ್ಪ ಹುಲೆಪ್ಪ ಹೇರೂರ, ಶರಣಮ್ಮ ಹೆರೂರ್ ಸೇರಿ ಹರವಾಳ ಗ್ರಾಮದ ಅನೇಕರು ಪಾಲ್ಗೊಂಡಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಸಣಗಿ ಶ್ರೀ ಬಲಭೀಮಸೇನ
ಕಲಬುರಗಿ: ಜೇವರ್ಗಿ ತಾಲೂಕು ಶ್ರೀಕ್ಷೇತ್ರ ರಾಸಣಗಿ ಶ್ರೀ ಬಲಭೀಮಸೇನ ದೇವರಿಗೆ ನೂತನ ಚಮ್ಮಾವುಗೆ (ಪಾದರಕ್ಷೆ) ಸೋಮವಾರ ಸಮರ್ಪಿಸಲಾಯಿತು.
ಪುರಾತನ ಪದ್ದತಿಯಂತೆ ಪ್ರತಿ 5 ವರ್ಷಗಳಿಗೊಮ್ಮೆ ಶ್ರೀ ಬಲಭೀಮಸೇನ ದೇವರಿಗೆ ಚಮ್ಮಾವುಗೆ ಸಮರ್ಪಣೆಯನ್ನು ಹರವಾಳ ಗ್ರಾಮದ ಹೆರೂರ ಮನೆತನದ ದಿ.ಗಂಗಮ್ಮಾ ದಿ.ಹುಲೆಪ್ಪ ಹೇರೂರ ಕುಟುಂಬದವರು ಮಾಡುತ್ತಿದ್ದಾರೆ. ಈ ಬಾರಿಯ ಸಮರ್ಪಣೆಯನ್ನು ಹರವಾಳ ಗ್ರಾಮದಿಂದ ಕಂಟೆಪ್ಪ ಹುಲೆಪ್ಪ ಹೇರೂರ ಅವರು ಮೆರವಣಿಗೆಯಲ್ಲಿ ಚಮ್ಮಾವುಗೆಯೊಂದಿಗೆ ಪಾದಯಾತ್ರೆ ನಡೆಸಿ ದೇವಸ್ಥಾನ ತಲುಪಿದರು. ರಾಸಣಗಿ ಬಲಭೀಮಸೇನ ದೇವಸ್ಥಾನ ಟ್ರಸ್ಟ್ ನವರು ಮತ್ತು ಗ್ರಾಮಸ್ಥರು ಚಮ್ಮಾವುಗೆಗಳ ಪುರಪ್ರವೇಶ ಮಾಡಿಕೊಂಡು ದೇವಸ್ಥಾನಕ್ಕೆ ತಂದರು. ನಂತರ ಶ್ರೀ ಬಲಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕ ಗಂಧಲೇಪನ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಿತು ಈ ಎಲ್ಲಾ ಕಾರ್ಯಕ್ರಮದ ಸೇವೆಯನ್ನು ಶರಣಮ್ಮ ಕಂಟೆಪ್ಪ ಹೇರೂರ ಹಾಗೂ ಸಹೋದರರು ನಡೆಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷ ಶಂಕರಗೌಡ ಪಾಟೀಲ್, ಕಾರ್ಯದರ್ಶಿ ಭೀಮಸೇನ ಜೋಶಿ, ಸದಸ್ಯ ಸಂಪತ್ ಮಾಡ್ಯಾಳಕರ್ ಸೇರಿ ಪದಾಧಿಕಾರಿಗಳು, ಗಣ್ಯರು ಇದ್ದರು.