ಹತ್ತು ಸಾವಿರ ಲಾಡುಗಳಿಂದ ಅಲಂಕಾರ

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅಮ್ಮನವರ ವರ್ಧಂತಿ ಮಹೋತ್ಸವ ಪ್ರಯುಕ್ತ 10 ಸಾವಿರ ಲಾಡುಗಳು ಹಾಗೂ ವಿವಿಧ ಬಗೆಯ ವಿಶೇಷ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅಮ್ಮನವರ ವರ್ಧಂತಿ ಮಹೋತ್ಸವ ಪ್ರಯುಕ್ತ 10 ಸಾವಿರ ಲಾಡುಗಳು ಹಾಗೂ ವಿವಿಧ ಬಗೆಯ ವಿಶೇಷ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಶ್ರೀರಂಗಪಟ್ಟಣ:

ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಪ್ರಯುಕ್ತ ಅಧಿದೇವತೆಗೆ ವಿಶೇಷ ಅಲಂಕಾರ ಮಾಡಿ ಪೂಜೆಗಳನ್ನು ನೆರವೇರಿಸಲಾಯಿತು.

ಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ ಸೋಮವಾರದಿಂದಲೇ 10 ಸಾವಿರ ಲಾಡುಗಳು ಹಾಗೂ ವಿವಿಧ ಬಗೆಯ ವಿಶೇಷ ಹೂಗಳಿಂದ ದೇಗುಲದ ಗರ್ಭಗುಡಿ ಮತ್ತು ಪ್ರಾಂಗಣವನ್ನು ಅಲಂಕರಿಸಲಾಗಿತ್ತು.

ದೇವಿಯ ವರ್ಧಂತಿಯ ದಿನವಾದ ಮಂಗಳವಾರ ಪ್ರಾಥಃಕಾಲದಲ್ಲಿಯೇ ಶಕ್ತಿದೇವತೆಗೆ ವೈದಿಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಫಲಪಂಚಾಮೃತ ಅಭಿಷೇಕ, ದುರ್ಗಾಸಪ್ತಷತಿ ಪಾರಾಯಣ, ಸಹಸ್ರನಾಮ ಹಾಗೂ ಅಷ್ಟೋತ್ತರ ಪೂಜೆಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲ ನೂರಾರು ಗ್ರಾಮಗಳಿಂದ ಗುಂಪು ಗುಂಪಾಗಿ ಆಗಮಿಸಿದ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net