ಬರಪೀಡಿತ ಜಿಲ್ಲೆ ಘೋಷಣೆ ಮಾಡಿ

ಸುರ್ಯಕಾಂತ ಮದಕಟ್ಟಿ
ಸುರ್ಯಕಾಂತ ಮದಕಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್​ ಸಭಾ ಒತ್ತಾಯ
ಬಸವಕಲ್ಯಾಣ: ಬೀದರ್​ ಜಿಲ್ಲೆಗೆ ಬರಗಾಲ ಘೋಷಿಸಿ ಎಕರೆಗೆ 50 ಸಾವಿರ ರೂ.ಯಂತೆ ಪರಿಹಾರ ಒದಗಿಸಬೇಕು. ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕಾಶೀನಾಥ ಬಿರಾದಾರ ಹಾಗೂ ಅಖಿಲ ಭಾರತ ಕಿಸಾನ್​ ಸಭಾ ತಾಲೂಕು ಅಧ್ಯಕ್ಷ ಸೂರ್ಯಕಾಂತ ಮದಕಟ್ಟಿ ಒತ್ತಾಯಿಸಿದರು.
ಮಳೆ ಕೊರತೆ ಅನುಭವಿಸುತ್ತಿರುವ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಷ್ಟಾದರೂ ಇಂದಿನ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ರೈತರ ಅಹವಾಲನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಅಭಿವೃದ್ಧಿಗೆ ರ್ನಿಲಕ್ಷ ತೋರುತ್ತಿವೆ ಎಂದು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಬಸವಕಲ್ಯಾಣದ ನೂತನ ಅನುಭವ ಮಂಟಪ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಈ ಭಾಗದ ರೈತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಮನವಿ ಪತ್ರ ಸಲ್ಲಿಸಲಾಗಿದ್ದು, ಅದರೆ ಇಲ್ಲಿಯವರೆಗೆ ಬರಗಾಲ ಘೋಷಣೆ ಹಾಗೂ ರೈತರ ಸಾಲ ಮನ್ನಾ ಮಾಡುವಂತ ಯಾವು ಕ್ರಮಕೈಗೊಂಡಿಲ್ಲ ಎಂದು ತಿಳಿಸಿದರು.
ರ್ಯತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾನ್​ಸಾಬ್​, ತಾಪಂ ಮಾಜಿ ಅಧ್ಯಕ್ಷ ದಿಲೀಪಕುಮಾರ ಗಿರಗಂಟೆ, ಕಲ್ಲಪ್ಪ ಗುಂಗೆ, ನಜಿಮೋದ್ದಿನ್​ ಶೇಖ್​, ರಾಮಯ್ಯ ಸ್ವಾಮಿ ಮಠಪತಿ, ಹಣಮಂತ ಬಾಲಕುಂದಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net