ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ

ದೇವರಹಿಪ್ಪರಗಿ ತಾಲೂಕಿನ ರೈತರ ಸಂಘದ ವತಿಯಿಂದ ವಿಜಯಪುರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ಉಪತಹಸೀಲ್ದಾರ್ ಸುರೇಶ ಮ್ಯೇಗೇರಿಗೆ ಮನವಿ ಸಲ್ಲಿಸಿದರು. ಈರಪ್ಪ ಕುಳೆಕುಮಟಗಿ, ಶಿವಾನಂದ ಹಿರೇಮಠ, ಚನ್ನಮ್ಮ ಮೇತ್ರಿ, ಅಮರೇಶ ಸರೂರ, ಭೀಮನಗೌಡ ಹಳ್ಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ
  • ವಿಶೇಷ ಪರಿಹಾರಕ್ಕೆ ಆಗ್ರಹ
ದೇವರಹಿಪ್ಪರಗಿ : ರೈತರು ಸಾಲ ಮಾಡಿ ಬಿತ್ತನೆ ಮಾಡಿ ಮಳೆ ಇಲ್ಲದ ಬೆಳೆ ಒಣಗಿ ಹೋಗಿದೆ. ವಿಜಯಪುರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಎಂದು ಘೋಷಣೆ ಮಾಡಿ ರೈತರಿಗೆ ವಿಶೇಷ ಪರಿಹಾರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಹೇಳಿದರು.
ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಉಪತಹಸೀಲ್ದಾರ್ ಸುರೇಶ ಮ್ಯೇಗೇರಿಗೆ ಸಲ್ಲಿಸಿ ಅವರು ಮಾತನಾಡಿದರು.
ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕಿನ ಸಾಲ ಮನ್ನಾ ಮಾಡಿ, ರೈತರ ಹಿತ ಕಾಪಾಡುಬೇಕು. ಒಂದು ವೇಳೆ ತಪ್ಪಿದ್ದಲ್ಲಿ ತಾಲೂಕಿನ ಎಲ್ಲ ರೈತರು ಸೇರಿ ತಾಲೂಕು ಕಚೇರಿ ಆವರಣದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಶಿವಾನಂದ ಹಿರೇಮಠ, ಮಹಿಳಾ ಘಟಕ ಅಧ್ಯಕ್ಷೆ ಚನ್ನಮ್ಮ ಮೇತ್ರಿ, ಅಮರೇಶ ಸರೂರ, ಭೀಮನಗೌಡ ಹಳ್ಳಿ, ಶರಣಯ್ಯ ಮೇಲಿನಮಠ, ಭೀಮನಗೌಡ ಬಿರಾದಾರ, ಅಶೋಕ ಬಿರಾದಾರ, ಕಾಶೀನಾಥ ಬಿರಾದಾರ, ರಾಜಕುಮಾರ ಬಂಟನೂರ, ಸನಗೊಂಡ ಪೂಜಾರಿ, ರಾಮು ಕಾಶಿ, ಪ್ರವೀಣ ದಂಡೋತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net