ಇಂಡಿ ಬರಗಾಲ ಪ್ರದೇಶವೆಂದು ಘೋಷಿಸಿ

ಇಂಡಿ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿದರು. ಬಿ.ಸಿ. ಸಾವಕಾರ, ಶಿವಯೋಗಪ್ಪ ಚನಗೊಂಡ, ಶ್ರೀಕಾಂತ ಕುಡಿಗನೂರ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ ಇತರರಿದ್ದರು.
ಇಂಡಿ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿದರು. ಬಿ.ಸಿ. ಸಾವಕಾರ, ಶಿವಯೋಗಪ್ಪ ಚನಗೊಂಡ, ಶ್ರೀಕಾಂತ ಕುಡಿಗನೂರ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಸಿ. ಸಾವಕಾರ ಆಗ್ರಹ
  • ಕಾಲುವೆಗೆ ನೀರು ಹರಿಸಲು ಮನವಿ
ಇಂಡಿ : ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ಕಂಗಾಲು ಆಗಿದ್ದಾರೆ. ಕಾರಣ ತಾಲೂಕು ಬರಗಾಲ ಪ್ರದೇಶವೆಂದು ಸಾರಬೇಕು ಮತ್ತು ತಾಲೂಕಿನಲ್ಲಿ ಹರಿಯುವ ಕೃಷ್ಣಾ ಕಾಲುವೆಗೆ ಬೇಗನೆ ನೀರು ಹರಿಸಬೇಕೆಂದು ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಸಾವಕಾರ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಭೀಮಾ ನದಿಗೆ ಮಹಾರಾಷ್ಟ್ರ ಸರ್ಕಾರ 5 ಟಿಎಂಸಿ ನೀರು ಬಿಡಬೇಕು ಈ ಕುರಿತು ಬೇಗನೆ ನೀರು ಬಿಡುಗಡೆಗೆ ಆಗ್ರಹಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ ಮಾತನಾಡಿ, ಕೃಷ್ಣಾ ಕಾಲುವೆಗೆ ನೀರು ಬಿಟ್ಟಿದ್ದಾಗಿ ಕಲಬುರಗಿ ವಿಭಾಗಿಯ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದು, ದಿನಾಂಕ ನಿಗದಿ ಮಾಡಿಲ್ಲ. ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಕೂಡಲೇ ಕಾಲುವೆಗೆ ನೀರು ಹರಿಸಲು ಆದೇಶ ನೀಡಲು ವಿನಂತಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಹಳ್ಳ ಕೆರೆ ಒಣಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ಮಳೆ ಇಲ್ಲದೆ ರೈತ ಕಂಗಾಲಾಗಿದ್ದು, ಕೃಷ್ಣಾ ಕಾಲುವೆಗೆ ಕೂಡಲೇ ನೀರು ಹರಿಸಲು ಆಗ್ರಹಿಸಿದರು. ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಬೀದಿ ಘಟಕದ ಸಂಘದ ಅಧ್ಯಕ್ಷ ಎ.ಆರ್ ಬಾಗವಾನ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net