ಆಲಮಟ್ಟಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಶಾಂತಗೌಡ. ಎಸ್.ಪಾಟೀಲ ಮಾತನಾಡಿದರು. ಕಲ್ಲು ಸೊನ್ನದ, ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ರವೀಂದ್ರ ಕೋತಿನ ಇತರರಿದ್ದರು.
ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ. ಎಸ್. ಪಾಟೀಲ ಹೇಳಿಕೆ
ಆಲಮಟ್ಟಿ: ಜಿಲ್ಲೆಯ 13 ತಾಲೂಕು ಹಾಗೂ ರಾಜ್ಯದ 31 ಜಿಲ್ಲೆಗಳಿಂದ ರೈತ ಮುಖಂಡರು ಸೇರಿಕೊಂಡು ಕೆಬಿಜೆಎನ್ನೆಲ್ ಎಂ.ಡಿ ಹಾಗೂ ಮುಖ್ಯ ಅಭಿಯಂತರರ ಕಚೇರಿಗಳ ಮುಂದೆ ಜೂ.8ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚುನಪ್ಪಾ ಪೂಜೇರಿ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ. ಎಸ್. ಪಾಟೀಲ ಹೇಳಿದರು.
ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಏತನೀರಾವರಿ ಕಾಮಗಾರಿ ಪ್ರಾರಂಭವಾಗಿ ಎಂಟು ವರ್ಷಗಳು ಗತಿಸಿದರೂ ಈ ಯೋಜನೆಯ ಜಾಕ್‌ವೆಲ್ ಹಾಗೂ ಲೀಡ್‌ಆಫ್ ಕೆನಾಲ್ ಮಾತ್ರ ಪೂರ್ಣ ಗೊಂಡಿದ್ದು, ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಇರುವ ತಾಂತ್ರಿಕ, ಹಾಗೂ ಕಾಲುವೆಯ ಮುಖ್ಯಜಾಲಕ್ಕೆ ಹೊಂದಿಕೊಂಡು ವಿತರಣಾ ಕಾಲುವೆ, ಸೀಳು ಕಾಲುವೆಗಳ ಕಾಮಗಾರಿ ಟೆಂಡರ್ ಕರೆದು ಶೀಘ್ರವಾಗಿ ಈ ಯೋಜನೆಯಿಂದ ಸುಮಾರು 14 ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.
ಅಂದು ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್ನೆಲ್ ಕಚೇರಿಯವರೆಗೆ ರೈತರ ರ‌್ಯಾಲಿ ಮೆರವಣಿಗೆ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ ತಿಳಿಸಿದರು. ರೈತ ಸಂಘದ ಕಲ್ಲು ಸೊನ್ನದ, ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ರವೀಂದ್ರ ಕೋತಿನ, ಅಲ್ಲಾಭಕ್ಷ ಲಷ್ಕರಿ, ತಿಮ್ಮಣ್ಣ ವಡ್ಡರ ಇತರರಿದ್ದರು.