ದಶಕಗಳು ಕಳೆದರು ಅಭಿವೃದ್ಧಿಯಾಗದ ರಸ್ತೆ road

ದಶಕಗಳು ಕಳೆದರು ಅಭಿವೃದ್ಧಿಯಾಗದ ರಸ್ತೆ road
ದಶಕಗಳು ಕಳೆದರು ಅಭಿವೃದ್ಧಿಯಾಗದ ರಸ್ತೆ road
Published on

ಪ್ರಮುಖ ಮುಖ್ಯಾಂಶಗಳು

  • ತುಮ್ಮನಹಳ್ಳಿ&ದೊಡ್ಡದಾಸರಹಳ್ಳಿಯ ಮಾರ್ಗ ಗುಂಡಿಮಯ
  • ವಾಹನ ಸವಾರರು ಪರದಾಡುವ ಸ್ಥಿತಿ
ಶಿಡ್ಲಘಟ್ಟ: ತಾಲೂಕಿನ ತುಮ್ಮನಹಳ್ಳಿಯಿಂದ ದೊಡ್ಡದಾಸರಹಳ್ಳಿ, ಚಿಕ್ಕದಾಸರಹಳ್ಳಿಯ ಕಡೆಗೆ ಸಂಚರಿಸುವ ರಸ್ತೆಯು ಹದಗೆಟ್ಟಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಎರಡು&ಮೂರು ದಶಕಗಳಿಂದ ಇಲ್ಲಿನ ಜನ ರಸ್ತೆ ಇಲ್ಲದೆ ಕಾಲು ದಾರಿಯಲ್ಲೇ ನಡೆದಾಡುತ್ತಾ ಕಾಲ ಕಳೆದಿದ್ದಾರೆ. ಸದ್ಯಕ್ಕಂತೂ ಉತ್ತಮ ರಸ್ತೆ ಆಗುವುದಿಲ್ಲ ಎಂಬ ನಂಬಿಕೆ ಅವರ ಮನದಲ್ಲಿ ಬಲವಾಗಿ ಬೇರೂರಿಬಿಟ್ಟಿದೆ. ನಮ್ಮ ಮಕ್ಕಳಾದರೂ ಡಾಂಬರು ರಸ್ತೆಯಲ್ಲಿ ನಡೆದಾಡುತ್ತಾರಾ ಎನ್ನುವ ನಿರೀೆಯಲ್ಲಿ ಇಲ್ಲಿನ ಜನ ಇದ್ದಾರೆ.road
ರಸ್ತೆಯುದ್ಧಕ್ಕೂ ಗುಂಡಿಗಳು ಬಿದ್ದಿವೆ. ಶಾಲಾ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ರೈತರು ತೋಟಗಳಿಂದ ಮೇವು, ಹಿಪ್ಪುನೇರಳೆ ಸೊಪ್ಪಿನ ಮೂಟೆಗಳು, ಬೆಳೆಗಳನ್ನು ಸಾಗಾಣಿಕೆ ಮಾಡಲು ಕಷ್ಟವಾಗುತ್ತಿದೆ.
ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ್ದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಗುಂಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಾರುಗಳು ಬಂದರೆ ಗುಂಡಿಗಳಲ್ಲಿ ಸಿಲುಕಿಕೊಳ್ಳುತ್ತಿವೆ. ಯಾರಾದರೂ ಇಳಿದು ತಳ್ಳುವ ಸ್ಥಿತಿ ಇದೆ. ಆಂಬುಲೆನ್ಸ್​ಗಳಂತೂ ಬರುವುದಕ್ಕೂ ಸಾಧ್ಯವಾಗಲ್ಲ. ನಾವು ಎಷ್ಟು ಮನವಿ ಮಾಡಿದರೂ ಈ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಸುಮಾರು 30 ವರ್ಷಗಳಿಂದ ಈ ರಸ್ತೆಗೆ ಡಾಂಬರೀಕರಣವಾಗಿಲ್ಲ. ಮಳಮಾಚನಹಳ್ಳಿಯ ಕಡೆಯಿಂದ ಬರುವ ಬಹುತೇಕ ವಾಹನ ಸವಾರರು, ಕೈವಾರಕ್ಕೆ ಹೋಗುವುದಕ್ಕೆ ಈ ರಸ್ತೆಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಗುಂಡಿಗಳನ್ನಾದರೂ ಮುಚ್ಚಿದರೆ ಅನುಕೂಲವಾಗಲಿದೆ ಎಂದು ಸ್ಥಳಿಯ ರೈತ ಮುನಿರಾಜಪ್ಪ ಮನವಿ ಮಾಡಿದರು.
ಅಪಘಾತಗಳು ಹೆಚ್ಚು: ಈ ರಸ್ತೆಯಲ್ಲಿ ರಾತ್ರಿಯ ವೇಳೆಯಲ್ಲಿ ಬರುವ ಬೈಕ್​ ಸವಾರರಲ್ಲಿ ಬಹಳಷ್ಟು ಮಂದಿ ಬಿದ್ದು ಗಾಯಗೊಳ್ಳುತ್ತಿದ್ದು, ಕೆಲವರು ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳಿಯ ನಿವಾಸಿ ನಾರಾಯಣಸ್ವಾಮಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net