ಮೃತರ ಸಂಖ್ಯೆ 7ಕ್ಕೆ ಏರಿಕೆ

Death toll rises to 7
Death toll rises to 7
Published on
ಬಾಗೇಪಲ್ಲಿ: ಚಿಕ್ಕಬಳ್ಳಾಪುರ&-ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 44ರ ಗಂಗೋತ್ರಿ ಪೆಟ್ರೋಲ್​ ಬಂಕ್​ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಾಗೇಪಲ್ಲಿಯ ರಾಜಮ್ಮ(50) ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
"

ದಿನಗೂಲಿ ಮುಗಿಸಿ ಮನೆಗೆ ವಾಪಸ್​ ಬರುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿರುವ ಕೂಲಿಕಾರರ ಕುಟುಂಬ ಸದಸ್ಯರ ಬದುಕು ಅನಾಥವಾಗಿರುವ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ಕೂಲಿಕಾರರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಿಪಿಐ(ಎಂ) ಪಕ್ಷ ಒತ್ತಾಯಿಸುತ್ತಿದೆ.

> ಮುನಿವೆಂಕಟಪ್ಪ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ, ಬಾಗೇಪಲ್ಲಿ

ತಾಲೂಕಿನ ಸದ್ದಪಲ್ಲಿ ತಾಂಡದ ಲಕ್ಷಿ$್ಮಬಾಯಿ, ಆಟೋಚಾಲಕ ಅಂಜಿನಪ್ಪ ಅಂತ್ಯಸಂಸ್ಕಾರ ಸದ್ದಪಲ್ಲಿ ಗ್ರಾಮದಲ್ಲಿ ಸೋಮವಾರ ನೆರವೇರಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತಪಟ್ಟ ಪಟ್ಟಣದ 1ನೇ ವಾರ್ಡ್​ ಅರುಣಮ್ಮ ಅಂತ್ಯಸಂಸ್ಕಾರ ನಲ್ಲಪರೆಡ್ಡಿಪಲ್ಲಿ ಗ್ರಾಮದಲ್ಲಿ, ಪಟ್ಟಣದ 7ನೇ ವಾರ್ಡ್​ನಲ್ಲಿ ವಾಸವಿದ್ದ ಚೇಳೂರು ತಾಲೂಕಿನ ರಾಶ್ಚೇರವು ಗ್ರಾಮದ ಉಮಾದೇವಿ, ವಿಜಯಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಅಂತ್ಯಸಂಸ್ಕಾರ ಸೋಮವಾರ ಬೆಳಗ್ಗೆ ಸ್ವಗ್ರಾಮ ರಾಶ್ಚೇರವುನಲ್ಲಿ, 7ನೇ ವಾರ್ಡ್​ನಲ್ಲಿ ವಾಸವಿದ್ದ ಸರೋಜಮ್ಮಳ ಅಂತ್ಯಸಂಸ್ಕಾರ ವೆಂಕಟರಾಮನಪಲ್ಲಿ ಗ್ರಾಮದಲ್ಲಿ ನಡೆದಿದೆ.
"

ಚಿಕ್ಕಬಳ್ಳಾಪುರ-&ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 44ರ ಮಾರ್ಗದಲ್ಲಿರುವ ಟಿ.ಬಿ.ಕ್ರಾಸ್​ನಿಂದ ಚೆಂಡೂರು ಕ್ರಾಸ್​ವರೆಗೂ ಸರ್ವೀಸ್​ ರಸ್ತೆ ಇಲ್ಲದ ಕಾರಣ ಹೆದ್ದಾರಿ ಮಾರ್ಗದಲ್ಲಿ ಪ್ರತಿನಿತ್ಯ ಅಪಘಾತಗಳ ಸಂಭವಿಸಿ ವಾಹನ ಸವಾರರು, ಪ್ರಯಾಣಿಕರು ಮೃತಪಟ್ಟಿದ್ದಾರೆ. ರಸ್ತೆ ಮಾರ್ಗವನ್ನು ಅಪಘಾತವಲಯವಾಗಿ ಘೋಷಿಸಿ ಸೂಚನಾ ಫಲಕ ಅಳವಡಿಸಿರುವುದು ಹೊರತುಪಡಿಸಿದರೆ ಎರಡು ಬದಿಯಲ್ಲಿ ಸರ್ವೀಸ್​ ನಿರ್ಮಿಸಲು ಮುಂದಾಗಿಲ್ಲ. ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಸಂಸದ ಡಾ.ಕೆ.ಸುಧಾಕರ್​ ಕಾಳಜಿವಹಿಸಿ ಸರ್ವೀಸ್​ ರಸ್ತೆ ನಿಮಾರ್ಣಕ್ಕೆ ಸರ್ಕಾರದ ಮೇಲೆ ಹೇರಬೇಕು.

> ಡಿ.ಟಿ.ಮುನಿಸ್ವಾಮಿ, ಮುಖಂಡರು ಕೂಲಿಕಾರರ ಸಂಘ ಬಾಗೇಪಲ್ಲಿ

ಹರಿನಾಥರೆಡ್ಡಿ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಹರಿನಾಥರೆಡ್ಡಿ ಭಾನುವಾರ ರಾತ್ರಿ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಮೃತರ ಅಂತ್ಯಸಂಸ್ಕಾರಕ್ಕೆ ತಲಾ 10 ಸಾವಿರ ರೂ. ನಗದು ನೀಡಿದರು.
ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸೋಮವಾರ ಬೆಳಗ್ಗೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತರಿಗೆ ಸಂತಾಪ ಸೂಚಿಸಿ 25 ಸಾವಿರ ರೂ.ನೀಡುವುದಾಗಿ ವೈಯಕ್ತಿಕ ಘೋಷಣೆ ಮಾಡುವುದರ ಜತೆಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಹಾಗೂ ವೆಂಕಟರಾನಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 10 ಸಾವಿರ ರೂ. ನೆರವು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net