ಬಾಲಕಿಯರ ಸಾವು, ಸೂಕ್ತ ತನಿಖೆ ನಡೆಸಿ

ಇಜೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಅನುಮಾನಸ್ಪದ ಸಾವು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜೇವರ್ಗಿಯಲ್ಲಿ ತಾಲೂಕು ಬೋವಿ ವಡ್ಡರ್​ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಶರಣು ಗುತ್ತೇದಾರ್​,  ರವೀಚಂದ್ರ ಗುತ್ತೇದಾರ್​, ಭೀಮಾಶಂಕರ ಯಲಗೋಡ, ಹಣಮಂತ ದಂಡಗುಂಡಲಕರ್​ ಇತರರಿದ್ದರು.
ಇಜೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಅನುಮಾನಸ್ಪದ ಸಾವು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜೇವರ್ಗಿಯಲ್ಲಿ ತಾಲೂಕು ಬೋವಿ ವಡ್ಡರ್​ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಶರಣು ಗುತ್ತೇದಾರ್​, ರವೀಚಂದ್ರ ಗುತ್ತೇದಾರ್​, ಭೀಮಾಶಂಕರ ಯಲಗೋಡ, ಹಣಮಂತ ದಂಡಗುಂಡಲಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೇವರ್ಗಿಯಲ್ಲಿ ಭೋವಿ ಸಮಾಜದಿಂದ ಪ್ರತಿಭಟನೆ
  • ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಜೇವರ್ಗಿ: ಇತ್ತೀಚೆಗೆ ಇಜೇರಿ ಗ್ರಾಮದ ಬಾವಿಯೊಂದರಲ್ಲಿ ಇಬ್ಬರು ಯವತಿಯರ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ದೊರೆತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಭೋವಿ ವಡ್ಡರ ಸಮಾಜದಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಭೋವಿ ವಡ್ಡರ ಸಮಾಜದ ತಾಲೂಕು ಅಧ್ಯಕ್ಷ ಶರಣು ಗುತ್ತೇದಾರ್​ ಮಾತನಾಡಿ, ಏ.13ರಂದು ಇಜೇರಿ ಹೊರವಲಯದಲ್ಲಿ ನಂದಿನಿ ನರಸಪ್ಪ ವಡ್ಡರ್​ (16), ಸಂಜನಾ ಗಂಗಪ್ಪ ಭೋವಿ (15) ಎಂಬ ಯುವತಿಯರ ಮೃತದೇಹಗಳು ಸಂಶಯಾಸ್ಪದವಾಗಿ ದೊರೆತಿದ್ದವು. ಸಾಕಷ್ಟು ಅನುಮಾನ ಹಾಗೂ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಎದುರಿಸುತ್ತಿರುವ ಸುರಕ್ಷತಾ ಸಮಸ್ಯೆ ಇದಾಗಿದೆ. ವಿಶೇಷ ತಂಡ ರಚನೆ ಮಾಡಿ ಪ್ರಕರಣದ ತನಿಖೆ ನಡೆಸಬೇಕು. ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ರವಿಚಂದ್ರ ಗುತ್ತೇದಾರ್​, ಭೀಮಾಶಂಕರ ಯಲಗೋಡ, ಹಣಮಂತ ದಂಡಗುಂಡಲಕರ್​, ಮಲ್ಲಿಕಾರ್ಜುನ ದೊಡ್ಡಮನಿ, ಪಂಡಿತ ಸಾಗರ, ಸುರೇಶ ಬೇಲೂರ, ಅಂಬಣ್ಣ ಅಂಬಲಗಿ, ಬಾನು ಪವಾರ್​, ಸಿದ್ರಾಮ ದಂಡಗುಂಡಲಕರ್​, ಹೀರಾ ಮಕ್ಕಳಕರ್​, ಗಂಗಾರಾಮ ರಾಜಾಪುರ, ತಿಮ್ಮಯ್ಯ ದೇವಕರ್​, ಪ್ರಭು ಭೂವಿ ಅಫಜಲಪುರ, ಮಲ್ಲು ದಂಡಗುಂಡಲಕರ್​, ಶರಣು ಕೋಳಕೂರ, ಸಿದ್ದು ಸಾಹು ಗೋಗಿ, ಗೀರಿಶ ತುಂಬಗಿ, ಸುನೀಲ ಹಳ್ಳಿ, ಭೀಮರಾಯ ಖಾದ್ಯಾಪುರ, ಭೀಮಾಶಂಕರ ಜನಿವಾರ, ಭಬ್ರುವಾಹನ ಬಿಳವಾರ, ಭೀಮಾಶಂಕರ ಭಂಕೂರ, ಲಕ್ಷ$್ಮಣ, ಸಾಯಿಬಣ್ಣ ಬಂದೇಪಲ್ಲಿ, ಸಂಜು ಮಂಜ್ಯಾಳಕರ್​, ಶಂಕರ ಪವಾರ್​, ರಾಜು ಮೇಸಿ ಶಹಾಬಾದ್​, ಸಿದ್ದು ಕಣ್ಣಿ, ರಾಜು ದಾಬಿಮನಿ, ರಮೇಶ ಮಂಜಾಳಕರ್​, ರಮೇಶ ಪವಾರ್​, ಸುಭಾಷ ಭೋವಿ, ಪರಶುರಾಮ ದಂಡಗುಂಡಲಕರ್​, ಕಳ್ಳೆಪ್ಪ ಇಜೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net