ಪ್ರಮುಖ ಮುಖ್ಯಾಂಶಗಳು.ಮೃತ್ಯುಕೂಪವಾದ ಕೃಷಿ ಹೊಂಡ ಮುಗಿಲು ಮುಟ್ಡಿದ ಪೋಷಕರ ಬಂಧುಗಳ ಆಕ್ರಂಧನ.ಯಾದಗಿರಿ :ಜಿಲ್ಲೆಯ ಕೆಂಭಾವಿ ಸಮೀಪದ ನಗನೂರ ಗ್ರಾಮದ ಕೃಷಿ ಹೊಂಡದಲ್ಲಿ ಈಜಲು . ಹೋಗಿದ್ದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ..ಕಿರಣ (6), ಬಸಮ್ಮ (11), ಶರತ್ (6) ಹಾಗೂಹನುಮೇಶ್ (7) ಮೃತಪಟ್ಟಿರುವ ಮಕ್ಕಳು ಎಂದು ಗುರುತಿಸಲಾಗಿದೆ..ಶಾಲೆಯ ರಜೆ ಇರುವುದರಿಂದ ಬೇಸಿಗೆಯ ಬಿಸಿಲತಾಪ ಹೆಚ್ಚಾಗಿದ್ದರಿಂದ ಮಕ್ಕಳು .ಕೃಷಿ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರು. .ನೀರಿನ ಆಳ ಗೊತ್ತಾಗದೆ ಮುಳುಗಿ ನಾಲ್ವರು ಮಕ್ಕಳ ದುರ್ಮರಣ ಹೊಂದಿದ್ದಾರೆ. ಘಟನೆ ಸುದ್ದಿ ಅರಿತ್ತೆಲೇ ಜನ ಜಮಾಗೊಂಡರು. ಪೋಷಕರ ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿತ್ತು..ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.