ಮಾಡಾಳು ಸ್ವರ್ಣ ಗೌರಿಗೆ ಬಾಗಿನ ಅರ್ಪಿಸಿದ ಡಿಸಿಎಂ ಪತ್ನಿ

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ಪತ್ನಿ ಕನ್ನಿಕಾ ಪರಮೇಶ್ವರ್ ಮಾಡಳಿನ ಮೂಲ ಸ್ವರ್ಣ ಗೌರಮ್ಮನಿಗೆ ಬಾಗಿನ ಅರ್ಪಿಸಿದರು. ಶಿವಲಿಂಗಪ್ಪ, ನಟರಾಜ್, ಮರಳು ಸಿದ್ದಪ್ಪ, ಶಿವಣ್ಣ, ಎಂ.ಎಸ..ಸ್ವಾಮಿ, ಲೋಕೇ ಶ್ ಇದ್ದರು
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ಪತ್ನಿ ಕನ್ನಿಕಾ ಪರಮೇಶ್ವರ್ ಮಾಡಳಿನ ಮೂಲ ಸ್ವರ್ಣ ಗೌರಮ್ಮನಿಗೆ ಬಾಗಿನ ಅರ್ಪಿಸಿದರು. ಶಿವಲಿಂಗಪ್ಪ, ನಟರಾಜ್, ಮರಳು ಸಿದ್ದಪ್ಪ, ಶಿವಣ್ಣ, ಎಂ.ಎಸ..ಸ್ವಾಮಿ, ಲೋಕೇ ಶ್ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಪರಮೇಶ್ವರ್
  • ಮಾಡಾಳು ಶ್ರೀ ಸ್ವರ್ಣ ಗೌರಮ್ಮನವರ ದರ್ಶನ
ಅರಸಿಕೆರೆ ಗ್ರಾಮಾಂತರ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಭಾನುವಾರ ಮಾಡಾಳು ಶ್ರೀ ಸ್ವರ್ಣ ಗೌರಮ್ಮನವರ ದರ್ಶನ ಪಡೆದು ದೇವಿಗೆ ಸೀರೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆದರು. ಸ್ವರ್ಣ ಗೌರಿ ದೇವಿ ಹಾಗೂ ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠಕ್ಕೆ ಹಿಂದಿನಿಂದಲೂ ಬರುತ್ತಿದ್ದು, ಕ್ಷೇತದ ಪೀಠಾಧಿಪತಿಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ಅಲ್ಲದೆ ಮಾಡಾಳು ಮೂಲ ಗೌರಮ್ಮ ದೇವಿ ಮತ್ತು ಹಾರನಹಳ್ಳಿಕೋಡಿಮಠ ಶಕ್ತಿಪೀಠಗಳಾಗಿದ್ದು, ನಂಬಿ ಬರುವ ಭಕ್ತರ ಮನದ ಇಷ್ಟಾರ್ಥಗಳು ಈಡೇರುತ್ತಿವೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ನಟರಾಜ್, ಮುಖಂಡರಾದ ಮ.ಸಿ.ನಟರಾಜ್, ಮಾಡಾಳು ಶಿವಲಿಂಗಪ್ಪ, ಶಿವಣ್ಣ, ಎಂ.ವಿ.ಸ್ವಾಮಿ, ಎಂ.ಟಿ.ಲೋಕೇಶ್, ಸೋಮಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್, ಪಿಎಸ್‌ಐ ಸುರೇಶ್ ಇದ್ದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net