ಗುರುಮಠಕಲ್ ತಹಸಿಲ್ ಕಚೇರಿಗೆ ಡಿಸಿ ಭೇಟಿ

ಗುರುಮಠಕಲ್ ಹೊರವಲಯದ ಚಪೆಟ್ಲಾ ಮಾರ್ಗದ ಜಮೀನೊಂದಕ್ಕೆ ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ ಭೇಟಿ ನೀಡಿ ಪರಿಶೀಲಿಸಿದರು. ಚನ್ನಮ್ಮಲ್ಲಪ್ಪ ಘಂಟಿ, ಪರಶುರಾಮ್, ಅಂಬ್ರೀಶ ಪಾಟೀಲ್, ನರಸಿಂಹ ಸ್ವಾಮಿ, ಶರಣಬಸ್ಸಪ್ಪ  ಇತರರಿದ್ದರು.
ಗುರುಮಠಕಲ್ ಹೊರವಲಯದ ಚಪೆಟ್ಲಾ ಮಾರ್ಗದ ಜಮೀನೊಂದಕ್ಕೆ ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ ಭೇಟಿ ನೀಡಿ ಪರಿಶೀಲಿಸಿದರು. ಚನ್ನಮ್ಮಲ್ಲಪ್ಪ ಘಂಟಿ, ಪರಶುರಾಮ್, ಅಂಬ್ರೀಶ ಪಾಟೀಲ್, ನರಸಿಂಹ ಸ್ವಾಮಿ, ಶರಣಬಸ್ಸಪ್ಪ ಇತರರಿದ್ದರು.
Published on

ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಮಂಗಳವಾರ ಗುರುಮಠಕಲ್ ತಹಸಿಲ್ ಕಚೇರಿಗೆ ಭೇಟಿ ನೀಡಿ ವಿವಿಧ ಇಲಾಖೆ ಅಽಕಾರಿಗಳೊಂದಿಗೆ ಸಭೆ ನಡೆಸಿದರು.

ಇಲಾಖೆಗಳ ಪ್ರಗತಿ ಕುರಿತು ಮಾಹಿತಿ ಪಡೆದ ಜಿಲ್ಲಾಽಕಾರಿ, ಚಪೆಟ್ಲಾ ರಸ್ತೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆ ಪರಿಶೀಲಿಸಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಲ್ಲಿಕಾರ್ಜುನ ಅವರಿಂದ ಮಾಹಿತಿ ಪಡೆದರು.
ಅಲ್ಲದೆ ಫೋಟೋ ಐಡಿ ಅವಾಂತರದಿಂದ ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಇಬ್ಬರ ವ್ಯಕ್ತಿಗಳ ಹೆಸರು ಒಂದೇಯಾಗಿದ್ದರಿಂದ ಅರ್ಹ ರೈತರಿಗೆ ಸಿಗಬೇಕಾದ ಪರಿಹಾರದ ಹಣ ಬೊರೊಬ್ಬ ವ್ಯಕ್ತಿಗೆ ಸಿಗುತ್ತಿದೆ ಎಂದು ಕೃಷಿ ಅಧಿಕಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಈ ತಾಂತ್ರಿಕ ದೋಷ ಸರಿಪಡಿಸಲಾಗುತ್ತಿದೆ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದರು.
ಪಟ್ಟಣಕ್ಕೆ ಭೀಮಾ ನದಿ ಮೂಲಕ ನೇರವಾಗಿ ನೀರು ಸರಬರಾಜು ಆಗುತ್ತಿದ್ದು, ಯಾವುದೇ ಫಿಲ್ಟರ್ ಆಗುತ್ತಿಲ್ಲ. ಇದರಿಂದ ರೋಗ ಹರಡುವ ಸಾಧ್ಯತೆ ಇದೆ. ಅಲ್ಲದೆ ಈ ಕುರಿತು ಉಪ ನ್ಯಾಯಮೂತಿಗಳ ಗಮನಕ್ಕೂ ತರಲಾಗಿದೆ ಎಂದು ಡಿಸಿ ಅವರ ಗಮನಕ್ಕೆ ತಂದಾಗ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಗೃಹ ನಿರ್ಮಾಣ ಮಂಡಳಿ ನಿವೇಶನ ಹಂಚಿಕೆ ಕಳೆದ ಆರು ವರ್ಷದಿಂದ ನನೆಗುದಿಗೆ ಬಿದ್ದಿದೆ ಎಂದಾಗ ಇಲಾಖೆ ಅಽಕಾರಿಗಳ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ತಹಸೀಲ್ದಾರ್ ಚನ್ನಮ್ಮಲ್ಲಪ್ಪ ಘಂಟಿ, ಎಇಇ ಪರಶುರಾಮ, ತಾಪಂ ಅಧಿಕಾರಿ ಅಂಬೀಶ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ನರಸಿಂಹ ಸ್ವಾಮಿ, ಶಿಶು ಅಭಿವೃದ್ಧಿ ಅಽಕಾರಿ ಶರಣಬಸ್ಸಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net