ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಡಿಸಿ dc

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಡಿಸಿ
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಡಿಸಿ
Published on
ಶ್ರೀನಿವಾಸಪುರ : ಏಪ್ರಿಲ್​ನಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದು, ಬಾಕಿ ಇರುವ ಕಂದಾಯ ಇಲಾಖೆಯ ಕೆಲಸಗಳ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿಸಿದರು. dc
ಕಂದಾಯ ಇಲಾಖೆ ಸಿಬ್ಬಂದಿ ಸಭೆ ಕರೆದು ಬಾಕಿ ಇರುವ ಪಿನಂಬರ್​ ಪೋಡಿ, ದರಖಾಸ್ತು, ಮಾಸಾಶನ, ಕೆರೆ ಒತ್ತುವರಿ, ನಿವೇಶನಗಳ ಹಂಚಿಕೆ, ಈ ಎಲ್ಲ ವಿಷಯಗಳ ಪ್ರಗತಿ ವರದಿ ಪರಿಗಣಿಸಿ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
ಕೃಷಿಗೆ ಬೇಕಾದ ಡ್ರಿಪ್​, ಪೇಪರ್​, ಟೈನ್​ ಉರಿ, ಪೈಪ್​, ಇತರೆ ಸಲಕರಣೆಗಳನ್ನು ತಾಲೂಕಿನ ಅಂಗಡಿಗಳಲ್ಲಿ ಮಾಲೀಕರು ಏಕಾಏಕಿ ದಿಢೀರನೆ ಬೆಲೆ ಏರಿಕೆ ಮಾಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ರಾಜ್ಯ ಸಂಘ ಹಾಗೂ ಹಸಿರು ಸೇನೆ ಮುಖಂಡರು ಮನವಿ ಮಾಡಿದರು.
ಕೇತಗಾನಹಳ್ಳಿ ರೈತ ನಾಗರಾಜ್​ ಅವರು, ನ್ಯಾಯಾಲಯದ ಆದೇಶವಿದ್ದರೂ ನಮ್ಮ ಜಮೀನುಗಳನ್ನು ಉಳುಮೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net