ಡಿಸಿ ಕಚೇರಿ ಎದುರು ಬೃಹತ್ ಹೋರಾಟ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯಾದಗಿರಿ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಅನೀತಾ ಹಿರೇಮಠ, ಬಸಲಿಂಗಮ್ಮ, ಬಸಮ್ಮ ಅಲ್ದಾಳ, ಯಮುನಮ್ಮ, ಕವಿತಾ ಶರಣಮ್ಮ, ಶಾಹೇಜಾದಿ ಬೇಗಂ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯಾದಗಿರಿ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಅನೀತಾ ಹಿರೇಮಠ, ಬಸಲಿಂಗಮ್ಮ, ಬಸಮ್ಮ ಅಲ್ದಾಳ, ಯಮುನಮ್ಮ, ಕವಿತಾ ಶರಣಮ್ಮ, ಶಾಹೇಜಾದಿ ಬೇಗಂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ, ಅಕ್ಷರ ದಾಸೋಹ ನೌಕರರ ಆಗ್ರಹ
  • ಕಪ್ಪು ಬಟ್ಟೆ ಧರಿಸಿ ಆಕ್ರೋಶ
ಯಾದಗಿರಿ: ರಾಜ್ಯ ಅಂಗನವಾಡಿ ನೌಕರರ ಸಂಘದ ೨೬, ರಾಜ್ಯ ಅಕ್ಷರ ದಾಸೋಹ ನೌಕರರ ೮ ಮತ್ತು ಇದೇ ಸಂಘಟನೆಯ ರಾಜ್ಯ ಮಟ್ಟದ ೧೯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ೫೦೦ಕ್ಕೂ ಹೆಚ್ಚು ನೌಕರರು ಕಪ್ಪÅ ಬಟ್ಟೆ ಧರಿಸಿ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಮೂರು ತಾಸಿಗೂ ಅಽಕ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ೨೦೨೬ರ ಮಾ.೨೩-೨೪ರ ಸಭೆಯ ಚರ್ಚೆಯಂತೆ ಕಾರ್ಯಕರ್ತೆಯರಿಗೆ ೧೫ ಸಾವಿರ ರೂ. ಮತ್ತು ಸಹಾಯಕಿಯರಿಗೆ ೧೦ ಸಾವಿರ ರೂ. ಸಂಬಳ ನಿಗದಿಪಡಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲï‌ಕೆಜಿ ಮತ್ತು ಯುಕೆಜಿ ವಿಸ್ತರಿಸುವುದರ ಜತೆಗೆ ಅನುದಾನ ನೀಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಪದಾಽಕಾರಿಗಳು ಒತ್ತಾಯಿಸಿದರು.
೩-೬ ವರ್ಷದೊಳಗಿನ ಮಕ್ಕಳಿಗೆ ಸಮವಸö, ಪುಸ್ತಕ ಮತ್ತು ಆಟಿಕೆ ಸಾಮಗ್ರಿ ಒದಗಿಸಬೇಕು. ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲ ಅಂಗನವಾಡಿಗಳನ್ನು ಅಂಗನವಾಡಿ ಕಮ್ ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಬಿಎಲï‌ಒ ಎಸ್‌ಐಆರ್ ಇತರ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಅಂಗನವಾಡಿ ನೌಕರರನ್ನು ಬಿಎಲï‌ಒ ಕೆಲಸದಿಂದ ಕೈಬಿಡಬೇಕು. ಪೋಷಣ ಟ್ಯಾಕರ್ ಹೆಸರಿನಲ್ಲಿ ಕಿರುರುಳ ನಿಲ್ಲಿಸಬೇಕು. ಮೊಬೈಲ್, ಡೇಟಾ ಮತ್ತು ನಿರ್ವಹಣಾ ವೆಚ್ಚ ಮರುಪಾವತಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಮೂಲಸೌಕರ್ಯ, ಗ್ಯಾಸ್ ಸಂಪರ್ಕ, ಅಡುಗೆ ಸಲಕರಣೆ ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿರುವ ಕೇಂದ್ರಗಳ ಬಾಡಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣ ಹೆಚ್ಚಿಸಬೇಕು ಸೇರಿ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಅAಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನೀತಾ ಹಿರೇಮಠ, ಕಾರ್ಯದರ್ಶಿ ಬಸಲಿಂಗಮ್ಮ, ಖಜಾಂಚಿ ಬಸಮ್ಮ ಅಲ್ದಾಳ, ಯಮುನಮ್ಮ, ಕವಿತಾ ಶರಣಮ್ಮ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಶಾಹೇಜಾದಿ ಬೇಗಂ, ಈರಮ್ಮ ಹೈಯಾಳಕರ್, ಮಂಜುಳಾ ಕಲಕೇರಿ, ಸುರೇಖಾ, ಮಂಜುಳಾ ಹೊಸಮನಿ, ಜಯಶ್ರೀ ಮೂಡಬೂಳ ಜತೆ ಪ್ರಾಂತ ರೈತ ಸಂಘ, ಸಿಐಟಿಯು ಸಂಘಟನೆಗಳ ಪದಾಽಕಾರಿಗಳು ಪಾಲ್ಗೊಂಡಿದ್ದರು.

ಮೊಟ್ಟೆ ಸುಲಿದ ಬಾಕಿ ಹಣ ನೀಡಿ

ಅನೇಕ ತಿಂಗಳಿAದ ಬಾಕಿ ಉಳಿಸಿಕೊಂಡಿರುವ ಮೊಟ್ಟೆ ಸುಲಿಯಲು ನಿಗದಿಪಡಿಸಿದ ೩೦ ಪೈಸೆ ಹಣ ಬಿಡುಗಡೆ ಮಾಡಬೇಕು. ಮಧ್ಯಾಹ್ನ ಬಿಸಿಯೂಟ ತಯಾರಕರಿಗೆ ಸಮವಸö ಸೀರೆ ವಿತರಿಸಬೇಕು. ಶಹಾಪುರ ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ೨೦೨೨ರಿಂದ ೨೦೨೫ರವರೆಗೆ ನಿವೃತ್ತಿ ಹೊಂದಿದ ನೌಕರರ ಪೈಕಿ ಕೇವಲ ೧೭ ಜನರಿಗೆ ಇಡುಗಂಟು ನೀಡಿದ್ದು, ಉಳಿದವರಿಗೂ ತಕ್ಷಣ ಕೊಡಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘದವರು ಒತ್ತಾಯಿಸಿದರು. ಎಸ್‌ಡಿಎಂಸಿ ಮತ್ತು ಮುಖ್ಯಗುರುಗಳ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ಮನಸ್ಸಿಗೆ ಬಂದAತೆ ಡ್ರಾ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯ ಅಡುಗೆಯವರು ಏನಾದರೂ ಪ್ರಶ್ನಿಸಿದರೆ ಅದೆಲ್ಲ ನೀವು ಕೇಳಬಾರದು. ನಿಮಗೆ ಯಾವುದೇ ಅಽಕಾರ ಇಲ್ಲ ಎಂದು ಹೇಳುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಮಧ್ಯಾಹ್ನ ಬಿಸಿಯೂಟದ ಸಾಮಗ್ರಿ ನೇರವಾಗಿ ಶಾಲೆಗಳಿಗೆ ತರದೆ ಎಲ್ಲೆಂದರಲ್ಲಿ ಇಳಿಸಿ ಹೋಗುತ್ತಿದ್ದು, ಅಲ್ಲಿಂದ ಮುಖ್ಯ ಅಡುಗೆಯವರು ಆಟೋಕ್ಕೆ ಬಾಡಿಗೆ ನೀಡಿ ಶಾಲೆಗೆ ಬರಬೇಕಾಗಿದೆ. ಬಿಸಿಯೂಟ ತಯಾರಕರಿಗೆ ಕೇವಲ ಮಕ್ಕಳಿಗೆ ಬಡಿಸಬೇಕೆಂದು ನೇಮಕ ಮಾಡಲಾಗಿದೆ. ಆದರೆ ಮುಖ್ಯಗುರುಗಳು ಬಿಸಿಯೂಟ ಜತೆ ಶೌಚಗೃಹ ಕ್ಲೀನ್ ಮಾಡಲು ಹೇಳುತ್ತಿz್ದÁರೆ. ಒಲ್ಲೆ ಎಂದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜೀಯ ಪ್ರಾತಿನಿದ್ಯ ನೀಡಿ
ಲಿಂಗತ್ವ ಅಲ್ಪಸಂಖ್ಯಾತರಿಗೂ ಶೇ.೩೩ ಮೀಸಲಾತಿಯಲ್ಲಿ ರಾಜಕೀಯ ಪ್ರಾತಿನಿದ್ಯ ಕಲ್ಪಿಸಬೇಕು, ವಿಧಾನ ಪರಿಷತ್, ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ರಚನೆ ಮಾಡಿ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಸುಪ್ರೀಂಕೋರ್ಟ್ ಸಲಹಾ ಸಮಿತಿ ಸದಸ್ಯೆ ಅಕ್ವೇ ಪದ್ಮಶಾಲಿ ಆಗ್ರಹಿಸಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಿಂದ ಸಿಕ್ಕಿರುವ ಹಕ್ಕನ್ನು ತಿದ್ದುಪಡಿ ಕಾಯ್ದೆ ಮೂಲಕ ಕಿತ್ತಿಕೊಂಡು ಸಮುದಾಯವನ್ನು ಅಪರಾಽಗಳನ್ನು ಮಾಡುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಒಂದು ಬಾರಿ ವಿಚಾರಣೆಯೂ ನಡೆದಿದ್ದು, ಸರ್ಕಾರದ ಅಭಿಪ್ರಾಯ ತಿಳಿಸಲು ಸೂಚಿಸಲಾಗಿದೆ ಎಂದರು.
ಲಿAಗತ್ವ ಅಲ್ಪಸಂಖ್ಯಾತರಿಗೆ ನಗರದಲ್ಲಿ ನಿವೇಶನದ ಹಕ್ಕು ಪತ್ರ ನೀಡಬಾರದು ಎಂದು ದೂರು ನೀಡಿರುವುದು ಗಮನಿಸಿದರೆ ಲಿಂಗ ಹಾಗೂ ಲಿಂಗತ್ವದ ಆಧಾರದಲ್ಲಿ ಸಮಾಜದಲ್ಲಿ ಎದುರಿಸುತ್ತಿರುವ ಬಹಿಷ್ಕಾರದ ವ್ಯವಸ್ಥೆಗೆ ಕಾರಣ ಯಾರು ಎಂಬುದೇ ಅರ್ಥವಾಗುತ್ತಿಲ್ಲ. ಸಮುದಾಯದ ಪರವಾಗಿ ಜಿ¯್ಲÉಯ ಆಡಳಿತ ಕೆಲಸ ಮಾಡುತ್ತಿದೆಯೇ ಎಂಬುದು ಅನುಮಾನ ಮೂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಳವಿಕ ಮಾತನಾಡಿ, ಲಿಂಗತ್ವ ಅಲ್ಪ ಸಂಖ್ಯಾತರನ್ನು ಬಹಿಷ್ಕಾರ ಮಾಡುತ್ತಿದ್ದು ಇದು ಅಸ್ಪÈಶ್ಯತೆಗೆ ಸಮಾನ ಆಚರಣೆ ಆಗಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಅಽಕಾರಿಗಳು ಕೆಲಸ ಮಾಡುತ್ತಿಲ್ಲ. ಲಿಂಗ ತಾರತಮ್ಯ ತೊಲಗಿಸಬೇಕು. ಎಲ್ಲ ಲಿಂಗದವರಿಗೆ ಸಮಾನ ಗೌರವ ಸಿಗಬೇಕು ಎಂದು ಅವರು ಹೇಳಿದರು. ಈ ವೇಳೆ ಅಬಿದಾ ಬೇಗಂ, ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಮಾಯಾ ಎಸ್.ಆರ್.ನಾಯಕ ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರಾದ ಪ್ರಿಯಾಂಕ ಹಾಗೂ ದೇವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net