ಕತ್ತಲ ರಾತ್ರಿ ಸಂಪ್ರದಾಯದಂತೆ ಆಚರಣೆ

ಕಂಪಸಾಗರ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೇ ದಿನ ಅಂಗವಾಗಿ ಅಲಾಯಿ ದೇವರುಗಳ ಅದ್ದೂರಿ ಮೆರವಣಿಗೆ ನಡೆಯಿತು.
ಕಂಪಸಾಗರ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೇ ದಿನ ಅಂಗವಾಗಿ ಅಲಾಯಿ ದೇವರುಗಳ ಅದ್ದೂರಿ ಮೆರವಣಿಗೆ ನಡೆಯಿತು.
Published on
ಮುನಿರಾಬಾದ್: ಮೊಹರಂ ಆಚರಣೆ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕತ್ತಲ ರಾತ್ರಿ ಕಾರ್ಯಕ್ರಮಗಳು ಜರುಗಿದ್ದು, ಶುಕ್ರವಾರ ಹಬ್ಬದ ಕೊನೇ ದಿನ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯ, ಭವ್ಯ ಮೆರವಣಿಗೆ ನಡೆಯಿತು.
ಅಲಾಯಿ ದೇವರ ಪ್ರತಿಷ್ಠಾಪನೆಗೊಳಿಸಿ ಪೂಜೆ, ಮೆರವಣಿಗೆ ಸೇರಿದಂತೆ ವಿಧಿ ವಿಧಾನಗಳು ಜರುಗಿದವು. ಹೋಬಳಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಮುಸ್ಲಿಮರು ಇಲ್ಲದಿದ್ದರೂ ಅಲ್ಲಿನ ಗ್ರಾಮಸ್ಥರು ಒಗ್ಗಟ್ಟಾಗಿ ಮುಸ್ಲಿಂ ಸಮುದಾಯದ ಸದಸ್ಯರನ್ನು ಆಹ್ವಾನಿಸಿ ಸಂಪ್ರದಾಯ ಬದ್ಧ ಆಚರಣೆ ನೆರವೇರಿಸಿದ ಚಿತ್ರಣ ಕಂಡುಬಂದಿತು.
ಭಕ್ತರು ಉಪವಾಸ ವ್ರತ ಆಚರಣೆ ಮಾಡುವುದು, ಮಕ್ಕಳಿಗೆ ಲಾಡಿ ಹಾಕಿಸುವುದು, ದೇವರಿಗೆ ನೈವೇದ್ಯ, ವಿವಿಧ ವೇಷ ಧರಿಸುವುದು, ರಿವಾಯತ್, ಗೀಗಿ ಪದ ಹಾಡುವುದು ಸೇರಿದಂತೆ ಮೆರವಣಿಗೆಯಲ್ಲಿ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಲಾಯಿತು.
ಮುನಿರಾಬಾದ್, ಹೊಸಳ್ಳಿ, ಹಿಟ್ನಾಳ, ಹುಲಿಗಿ, ಶಿವಪುರ, ಅಗಳಕೇರಾ, ಹರ್ಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೊಹರಂ ಅಂಗವಾಗಿ ಅನೇಕ ಭಕ್ತರು ಹುಲಿ ವೇಷ ಧರಿಸಿ ನೃತ್ಯ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net