ನಿಗದಿಗಿಂತ ಹೆಚ್ಚಿನ ದರಕ್ಕೆ ಡಿಎಪಿ ಮಾರಾಟ

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಗಟ್ಟಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ರೈತರಿಗೆ ವಿತರಿಸಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು, ರೈತರು ಚಿತ್ತಾಪುರದಲ್ಲಿ ಸೋಮವಾರ ಗ್ರೇಡ್​-2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು.
ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಗಟ್ಟಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ರೈತರಿಗೆ ವಿತರಿಸಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು, ರೈತರು ಚಿತ್ತಾಪುರದಲ್ಲಿ ಸೋಮವಾರ ಗ್ರೇಡ್​-2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು.
Published on
ಚಿತ್ತಾಪುರ: ಎಪಿಎಂಸಿ ಆವರಣದಲ್ಲಿ ಸ್ಥಾಪಿಸಿದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂದ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆದು ಡಿಎಪಿ ಮಾರುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರ್ಕಾರದ ದರದಂತೆ ರೈತರಿಗೆ ವಿತರಿಸಬೇಕು ಎಂದು ಕರ್ನಾಟಕ ರಣಾ ವೇದಿಕೆ ತಾಲೂಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪ್ರಜಾಸೌಧ ಕಚೇರಿಯಲ್ಲಿ ಸೋಮವಾರ ಗ್ರೇಡ್​&2 ತಹಸೀಲ್ದಾರ್​ ರಾಜಕುಮಾರ ಮರತೂರಕರ್​ ಅವರಿಗೆ ಮನವಿಪತ್ರ ಸಲ್ಲಿಸಿದ ವೇದಿಕೆ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ, ಮಳೆಗಾಲ ಆರಂಭವಾಗಿದೆ. ಬೀಜ ಬಿತ್ತನೆಗಾಗಿ ರಸಗೊಬ್ಬರದ ಅಗತ್ಯವಿದೆ. ಆದರೆ ಸರ್ಕಾರದ ದರ 1350 ರೂ. ಇದ್ದರೆ, ವರ್ತಕರು 150 ರೂ. ಹೆಚ್ಚು ಪಡೆಯುತ್ತಿದ್ದಾರೆ. ರಸಗೊಬ್ಬರವನ್ನು ಕಾಳಸಂತೆಯಲ್ಲೂ ಹೆಚ್ಚು ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಚೀಟಿ ತೆಗೆದುಕೊಂಡು ದಿನನಿತ್ಯ ಸರತಿ ಸಾಲಿನಲ್ಲಿ ನಿಂತರೂ ಡಿಎಪಿ ಸಿಗುತ್ತಿಲ್ಲ. ಆದರೆ ಎಲ್ಲೋ ಕುಳಿತುಕೊಂಡ ಪ್ರಭಾವಿಗಳು, ರಾಜಕಾರಣಿಗಳು ಟ್ರಾ$್ಯಕ್ಟರ್​ಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಡಿಎಪಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸೆನ್ಸ್​ ರದ್ದುಪಡಿಸುವುದಾಗಿ ಕೃಷಿ ಅಧಿಕಾರಿಗಳು ಹೇಳಿದ್ದರೂ ಗಣನೆಗೆ ತೆಗೆದುಕೊಳ್ಳದೆ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತರಾದ ದೀಪಕ ಬೊಮ್ಮನೋರ, ಅಕ್ಬರ್​ ಅಲಿ ಬಾಷುಮಿಯ್ಯಾ, ಗೌರಿಶಂಕರ ಬಂಡಿ, ಶಿವರಾಜ ಮಲ್ಲಿಕಾರ್ಜುನ, ದಸ್ತಗಿರ್​ ಅಲಿಸಾಬ್​, ರೇವಣಸಿದ್ದಪ್ಪ ಕಾಳಗಿ, ಸಾಬಣ್ಣ, ಚಂದ್ರಶೇಖರ ವಡ್ಡಡಗಿ, ಪರಮೇಶ್ವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net