

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇಂಟೆಲಿಜೆಂಟ್ಟ್ರಾನ್ಸ್‌ಪೋರ್ಟೇಶನ್ ಸಿಸ್ಟಮ್ಸ್ವಿಭಾಗದ ಅಡಿಯಲ್ಲಿ ನಡೆದ ಬಿಲ್ಡ್ಇಂಡಿಯಾ ಇನ್‌ಫ್ರಾ ಅವಾರ್ಡ್ಸ್2026 ಕಾರ್ಯಕ್ರಮದಲ್ಲಿಡಾನ್ಲಾ ಟೆಕ್ನಾಲಜೀಸ್ ಇಂಡಿಯಾಲಿಮಿಟೆಡ್ ಸಂಸ್ಥೆಗೆ ಪ್ರತಿಷ್ಠಿತ‘ಇನ್ನೋವೇಶನ್ ಇನ್ ವೆಹಿಕಲ್ಸೇಫ್ಟಿ’ ಪ್ರಶಸ್ತಿ ದೊರೆತಿದೆ.
ಇತ್ತೀಚೆಗೆನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿಕೇಂದ್ರ ರಸ್ತೆ ಸಾರಿಗೆ ಮತ್ತುಹೆದ್ದಾರಿ ಸಚಿವ ನಿತಿನ್ ಗಡ್ಕರಿಪ್ರಶಸ್ತಿ ಪ್ರದಾನ ಮಾಡಿದ್ದು,ಸಂಸ್ಥೆಯ ಅಧ್ಯಕ್ಷರಾಜು ದಂಡು ಪ್ರಶಸ್ತಿ ಸ್ವೀಕರಿಸಿದ್ದಾರೆ.ಪರೀಕ್ಷಾರ್ಥವಾಗಿ ಬೆಂಗಳೂರಿನಲ್ಲಿ ಸಂಸ್ಥೆಯುಪ್ರದರ್ಶಿಸಿದ ಎಮೆರ್ಜೆನ್ಸಿಮೊಬಿಲಿಟಿ ಯೋಜನೆಯ ವಿ2ಎಕ್ಸ್ಗ್ರೀನ್ ಕಾರಿಡಾರ್ ಪ್ರಾಜೆಕ್ಟ್‌ಗೆಕೇಂದ್ರ ಸರ್ಕಾರದಿಂದ ಈ ಮಾನ್ಯತೆದೊರೆತಿದೆ.
ಈಕುರಿತು ಬೆಂಗಳೂರಿನಲ್ಲಿಸುದ್ದಿಗೋಷ್ಠಿಯಲ್ಲಿ ವಿವರನೀಡಿದ ಸಂಸ್ಥೆಯ ಇಂಜಿನಿಯರ್ಮಹಾದೇವಸ್ವಾಮಿ,ಡಾನ್ಲಾ ಸಂಸ್ಥೆಯುಯುಎಸ್‌ನಲ್ಲಿ 40ವರ್ಷಗಳಿಂದಕಾರ್ಯ ನಿರ್ವಹಿಸುತ್ತಿದ್ದು,ಕಳೆದ 26ವರ್ಷಗಳಿಂದಭಾರತದ ವಿವಿದೆಡೆ ಸಂಸ್ಥೆಯಶಾಖೆಗಳನ್ನು ನಡೆಸುತ್ತಿದೆ.ರಸ್ತೆ ಸುರಕ್ಷತೆಗೆಸಂಬಂಧಪಟ್ಟಂತೆ ಹಲವು ಆವಿಷ್ಕಾರಗಳನ್ನುಮಾಡಿರುವ ಸಂಸ್ಥೆ ಆ್ಯಂಬುಲೆನ್ಸ್ಸುಗಮ ಸಂಚಾರಕ್ಕಾಗಿ ಆದ್ಯತೆಯಗ್ರೀನ್ ಸಿಗ್ನಲ್ ಮೂಲಕ ವೇಗವಾಗಿಆಸ್ಪತ್ರೆಗೆ ತಲುಪಲು ಬೇಕಾದವಿಶೇಷ ಎಐ ತಂತ್ರಜ್ಞಾನದ ಡಿವೈಸ್‌ನ್ನುಕಂಡು ಹಿಡಿದಿದೆ.ಈ ಡಿವೈಸ್ಸಿಗ್ನಲ್‌ಗಳಲ್ಲಿ ಅಳವಡಿಸುವುದರಿಂದ1 ಕಿ.ಮೀ.ದೂರದಲ್ಲಿರುವಾಗಲೇಈ ಡಿವೈಸ್ ಅಳವಡಿಸಿರುವಆ್ಯಂಬುಲೆನ್ಸ್‌ಗಳು ಬರುವುದನ್ನುಗಮನಿಸಿ ಗ್ರೀನ್ ಸಿಗ್ನಲ್ ಮೂಲಕಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ. ಕೂಡಲೇ ಆ್ಯಂಬುಲೆನ್ಸ್ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.ಇದರಿಂದ ತುರ್ತುಸೇವೆಯ ವಾಹನಗಳು ವಿಳಂಬವಿಲ್ಲದೆಮುಂದಿನ ಗುರಿ ತಲುಪಬಹುದು.ಆ್ಯಂಬುಲೆನ್ಸ್,ಅಗ್ನಿಶಾಮಕವಾಹನಗಳಿಗೆ ಇದು ಸಹಕಾರಿಯಾಗಲಿದೆಎಂದು ವಿವರಿಸಿದರು.
ವಾಹನ ತಂತ್ರಜ್ಞಾನ ಸೇವೆಗಳ ಅನುಭವ ಹೊಂದಿರುವ ಕನೆಕ್ಟೆಡ್ ವೆಹಿಕಲ್ ಟೆಕ್ನಾಲಜೀಸ್ ಕ್ಷೇತ್ರದ ಮುಂಚೂಣಿಯಲ್ಲಿರುವ ಡಾನ್ಲಾ ಸಂಸ್ಥೆ ಆಟೋಮೋಟಿವ್ ಗ್ರಾಹಕರಿಗಾಗಿ ಟೆಲಿಮ್ಯಾಟಿಕ್ಸ್, ವೆಹಿಕಲ್ ಟು ಎವೆರಿಥಿಂಗ್ (ವಿ2ಎಕ್ಸ್) ಕಮ್ಯುನಿಕೇಶನ್, ವೆಹಿಕಲ್ ಎಲೆಕ್ಟ್ರಾನಿಕ್ಸ್ ಹಾಗೂ ಇಂಟೆಲಿಜೆಂಟ್ ಮೊಬಿಲಿಟಿ ಕ್ಷೇತ್ರಗಳಲ್ಲಿ ಸುಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ನಮ್ಮ ಸಂಸ್ಥೆಯ ಕ್ರಿಯಾಶೀಲತೆಯನ್ನು ಗಮನಿಸಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಗೌರವ ಸ್ವೀಕರಿಸಿದ್ದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.