ರಸ್ತೆ ಗುಂಡಿ ಗಂಡಾಂತರ / NANDAGUDI

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಮೇಡೂರು ಗ್ರಾಮದ ರಸ್ತೆಗಳು ಹೋಂಡಗಳಲ್ಲಿ ನೀರು ತುಂಬಿರುವ ಭಾವಚಿತ್ರಗಳು.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಮೇಡೂರು ಗ್ರಾಮದ ರಸ್ತೆಗಳು ಹೋಂಡಗಳಲ್ಲಿ ನೀರು ತುಂಬಿರುವ ಭಾವಚಿತ್ರಗಳು.
Published on

ನಂದಗುಡಿ :

ಹೋಬಳಿಯ ಸಿದ್ದನಹಳ್ಳಿ ಮೂಲಕ ಬೈಲನರಸಾಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಅಲ್ಲಲ್ಲಿ

ಮೊಣಕಾಲುದ್ದ ಗುಂಡಿಗಳಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದೇ ಸಂಚರಿಸುತ್ತಿದ್ದಾರೆ.

ಈ ಹಿಂದೆ ಹಾಕಿದ್ದ ಡಾಂಬರು ಕಿತ್ತು ಹೋಗಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ರಸ್ತೆಯ ಗುಂಡಿಗಳು ಸಣ್ಣ ಕೆರೆಗಳನ್ನೇ ಮೀರಿಸುವಂತೆ ನೀರುತುಂಬಿಕೊಳ್ಳುತ್ತಿವೆ. ರಸ್ತೆಗೆ ಡಾಂಬಾರು ಹಾಕಲಾಗಿತ್ತೆ ? ಎಂಬುದನ್ನು ಭೂತಗನ್ನಡಿ ಹಾಕಿಕೊಂಡು ಹುಡುಕಿದರೂ ಕುರುಹು ಸಹ ದೊರೆಯಲಾರದ ಮಟ್ಟಿಗೆ ಮಾರ್ಗ ಅಧ್ವಾನಗೊಂಡಿದ್ದು,

ಹೋಬಳಿ ಕೇಂದ್ರ ನಂದಗುಡಿಗೆ ಸಂಚರಿಸಬೇಕಾದರೆ ನಿತ್ಯ ಪ್ರಯಾಣಿಕರು ಯಾತನೆ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಮಾರ್ಗದಲ್ಲಿ ಎದ್ದುಬಿದ್ದು ಹೋಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ರಸ್ತೆ ಅಭಿವೃದ್ಧಿಗೊಂಡಿವೆ ಎಂದು ಕಚೇರಿಯಲ್ಲಿ ಕುಳಿತು ಹೇಳುವ ಅಧಿಕಾರಿಗಳು ಒಮ್ಮೆ ಈ ರಸ್ತೆ ಬಂದು ನೋಡಲಿ.. ಎಂದು ಆಕ್ರೋಶವ್ಯಕ್ತಪಡಿಸುವ ಪ್ರಯಾಣಿಕರು, ಸಣ್ಣ ಮಳೆಗೆ ರಸ್ತೆಗಳು ಇಷ್ಟೊಂದು ಹದಗೆಡುತ್ತಿವೆ. ಇನ್ನು ಭಾರಿ ಮಳೆಯಾದಲ್ಲಿ ಸಂಪೂರ್ಣ ಕಿತ್ತು ಹೋಗಿ ಓಡಾಡಲು ಬಾರದಂತ ಸ್ಥಿತಿಗೆ ಬರಲಿದೆ. ಸದರಿ ಮಾರ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವ ಕಾರಣ ರಸ್ತೆ ಕಿತ್ತು ಹೋಗಿದೆ. ರೈತರು ಜಮೀನಿಗೆ ತೆರಳಲು ನಿತ್ಯ ಹರಸಾಹಸ ಪಡುತ್ತಿದ್ದಾರೆ. ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಿಡಬ್ಲ್ಯೂಡಿ ವ್ಯಾಪ್ತಿಯ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಪಟ್ಟಿಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ. ಸಿದ್ದನಹಳ್ಳಿ ಮೂಲಕ ಬೈಲನರಸಾಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಶ್ರೀದಲ್ಲೇ ದುರಸ್ತಿ ಮಾಡಲಾಗುವುದು.

— > ಹೇಮಂತ್​ ಪಿಡಬ್ಲ್ಯೂಡಿ ಎಇ, ನಂದಗುಡಿ ಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net