ದಾಸೋಹದಲ್ಲಿ ದಾಖಲೆ ಬರೆದ ದಾನೇಶ್ವರ ಶ್ರೀಗಳು; ಶ್ರೀಶೈಲ ಜಗದ್ಗುರುಗಳ ಸಂತಾಪ

ದಾಸೋಹ ರತ್ನ ಚಕ್ರವರ್ತಿ ಶ್ರೀದಾನೇಶ್ವರ ಸ್ವಾಮೀಜಿ ಇನ್ನಿಲ್ಲ
ದಾಸೋಹ ರತ್ನ ಚಕ್ರವರ್ತಿ ಶ್ರೀದಾನೇಶ್ವರ ಸ್ವಾಮೀಜಿ ಇನ್ನಿಲ್ಲ
Published on

ಪ್ರಮುಖ ಮುಖ್ಯಾಂಶಗಳು

  • ದಾಸೋಹ ರತ್ನ ಚಕ್ರವರ್ತಿ ಶ್ರೀದಾನೇಶ್ವರ ಸ್ವಾಮೀಜಿ ಇನ್ನಿಲ್ಲ
  • ದಾಸೋಹದ ಮೂಲಕ ಹೊಸ ದಾಖಲೆ ಬರೆದಿದ್ದ ಶ್ರೀಗಳು
  • ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಭಗವತ್ಪಾದರ ಸಂತಾಪ

ರಬಕವಿಬನಹಟ್ಟಿ :ಅನಾರೋಗ್ಯದಿಂದನಿಧನರಾದ ಬಂಡಿಗಣಿ ಬಸವಗೋಪಾಲನೀಲಮಾಣಿಕಮಠದ ದಾಸೋಹ ರತ್ನಶ್ರೀದಾನೇಶ್ವರ ಸ್ವಾಮೀಜಿ ದಾಸೋಹದಮೂಲಕ ಹೊಸ ದಾಖಲೆ ಬರೆದಿದ್ದರುಎಂದು ಶ್ರೀಶೈಲ ಜಗದ್ಗುರುಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಹೇಳಿದ್ದಾರೆ.

ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿನಡೆದ ಶ್ರೀ ದಾನೇಶ್ವರ ಸ್ವಾಮಿಗಳಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡುಅವರು ಸಂತಾಪ ವ್ಯಕ್ತಪಡಿಸಿದರು.

ಸಾಮಾನ್ಯವಾಗಿಯಾವುದೇ ಮಠದ ಸ್ವಾಮಿಗಳಾದವರುತಮ್ಮ ಮಠಕ್ಕೆ ಬರುವ ಭಕ್ತರಿಗೆದಾಸೋಹವನ್ನು ಮಾಡುತ್ತಾರೆ.ಹೆಚ್ಚೆಂದರೆತಾವು ನಡೆದುಕೊಳ್ಳುವ ಪೀಠಕ್ಕೆಹೋಗಿ ಅಲ್ಲಿ ದಾಸೋಹ ಮಾಡಬಹುದು.ಆದರೆ ಬಂಡಿಗಳಿದಾನೇಶ್ವರ ಸ್ವಾಮಿಗಳು ಉತ್ತರಕರ್ನಾಟಕದ ಹಲವು ಮಠ,ಮಂದಿರಗಳಲ್ಲಿನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆಬಂದು, ತಾವೇಎಲ್ಲ ದಿನಸಿ ಪದಾರ್ಥಗಳನ್ನುತಂದು ದಾಸೋಹ ಮಾಡುತ್ತಿದ್ದರು.ಯಡೂರ,ಶ್ರೀಶೈಲ,ಪಂಡರಪುರ ಹೀಗೆಎಲ್ಲ ಜಾತ್ರೆಗಳಲ್ಲಿ ದಾಸೋಹಮಾಡುವ ಮೂಲಕ ಭಕ್ತರ ಹಸಿವಿನಲ್ಲಿಭಗವಂತನನ್ನು ಕಂಡು ಅವರನ್ನುತೃಪ್ತಿ ಪಡಿಸುವ ಮೂಲಕ ದೇವರಕೃಪೆಯನ್ನು ಪಡೆದಿದ್ದರು.ದಾಸೋಹ ಎಂದರೆದಾನೇಶ್ವರರು,ದಾನೇಶ್ವರರುಎಂದರೆ ದಾಸೋಹ ಎಂಬ ದಾಖಲೆಗೆ ಅವರುಕಾರಣೀಭೂತರಾಗಿದ್ದರು.ಆದ್ದರಿಂದಲೇಶ್ರೀಶೈಲ ಪೀಠದಿಂದ ಶ್ರೀಗಳಿಗೆದಾಸೋಹ ರತ್ನ ಎಂಬ ಬಿರುದು ನೀಡಲಾಗಿತ್ತುಎಂದು ಜಗದ್ಗುರುಗಳು ನೆನಪಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net