ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು economic devlpoment

ಶಿರಾ ತಾಲೂಕಿನ ನಂದಿನಿ ಕ್ಷೀರ ಭವನದಲ್ಲಿ ಹಮ್ಮಿ economic devlpoment ಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನುವಾರುಗಳ ಮರಣ ವಿಮೆ ಪರಿಹಾರ ವಿತರಿಸಲಾಯಿತು. ವಿಧಾನಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ, ಮುಖಂಡ ಆರ್​.ಉಗ್ರೇಶ್​, ಸಮಾಜಸೇವಕ ಶ್ರೀರಾಮೇಗೌಡ ಇದ್ದರು.
ಶಿರಾ ತಾಲೂಕಿನ ನಂದಿನಿ ಕ್ಷೀರ ಭವನದಲ್ಲಿ ಹಮ್ಮಿ economic devlpoment ಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನುವಾರುಗಳ ಮರಣ ವಿಮೆ ಪರಿಹಾರ ವಿತರಿಸಲಾಯಿತು. ವಿಧಾನಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ, ಮುಖಂಡ ಆರ್​.ಉಗ್ರೇಶ್​, ಸಮಾಜಸೇವಕ ಶ್ರೀರಾಮೇಗೌಡ ಇದ್ದರು.
Published on
ಶಿರಾ :ಹೈನುಗಾರಿಕೆ ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ದೇಶದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್​.ಆರ್​.ಗೌಡ ಹೇಳಿದರು. economic devlpoment
ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟ ಆಯೋಜಿಸಿದ್ದ ಡಾ.ವರ್ಗೀಸ್​ ಕುರಿಯನ್​ ಅವರ ಪುತ್ಥಳಿ ಅನಾವರಣ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್​ ವಿತರಣೆ ಹಾಗೂ ಎನ್​ಆರ್​ಎಲ್​ಎಂ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿದಿನ ಸುಮಾರು 5 ಕೋಟಿ ಲೀಟರ್​ಗಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಕರ್ನಾಟಕದಲ್ಲೇ ಸುಮಾರು 1 ಕೋಟಿ ಲೀಟರ್​ ಹಾಲು ಉತ್ಪಾದನೆಯಾಗುತ್ತದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸ್ಟೆಪ್​ ಯೋಜನೆ ಅಡಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘಗಳಿಗೆ 10 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 18 ವರ್ಷ ಮೇಲ್ಪಟ್ಟ ಯುವಕರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮತ್ತೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಾನುವಾರುಗಳ ಮರಣ ವಿಮೆ ಪರಿಹಾರವಾಗಿ 70 ಲಕ್ಷ ರೂ., ಡೇರಿ ಕಟ್ಟಡ ನಿಮಾರ್ಣಕ್ಕೆ 30 ಲಕ್ಷ ರೂ. ಹಾಗೂ ಮೃತಪಟ್ಟ ಹೈನುಗಾರರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಚೆಕ್​ ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಸುಮಾರು 32 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಕಲ್ಕೆರೆ ರವಿಕುಮಾರ್​, ಪಿಎಲ್​ಡಿ ಬ್ಯಾಂಕ್​ ಉಪಾಧ್ಯಕ್ಷ ಅಜ್ಜಣ್ಣ, ತುಮುಲ್​ ಜಿಲ್ಲಾ ವ್ಯವಸ್ಥಾಪಕ ಡಾ.ಟಿ.ವಿ.ಶ್ರೀನಿವಾಸ್​, ತಾಲೂಕು ವ್ಯವಸ್ಥಾಪಕ ಗಿರೀಶ್​, ವಿಸ್ತರಣಾಧಿಕಾರಿ ಚೈತ್ರ, ಸ್ಟೆಪ್​ ಯೋಜನೆಯ ಮಧು, ಬಾಬಾ ಫಕೃದ್ದಿನ್​, ಮದಲೂರು ಸಹಕಾರ ಸಂಘದ ಅಧ್ಯಕ್ಷ ನಾಗೇಗೌಡ, ಮಾಜಿ ಸೂಡಾ ಅಧ್ಯಕ್ಷ ಗುಮ್ಮನಹಳ್ಳಿ ಈರಣ್ಣ, ಮುದ್ದು ಗಣೇಶ್​, ಭಾನುಪ್ರಕಾಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net