ಆರ್ಥಿಕ ಪ್ರಗತಿಗೆ ಡೇರಿಗಳು ಸಹಕಾರಿ DAIRY

ಪಾವಗಡ DAIRYತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಘಟಕ ಚಾಲನೆ ಕಾರ್ಯಕ್ರಮದಲ್ಲಿ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಶೇಷಗಿರಿ, ಗುತ್ತಿಗೆದಾರರಾದ ಆರ್​.ಎಂ. ಹನುಮಂತರಾಯಪ್ಪ, ಸುಬ್ಬರಾಯಪ್ಪ ಇತರರು ಇದ್ದರು.
ಪಾವಗಡ DAIRYತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಘಟಕ ಚಾಲನೆ ಕಾರ್ಯಕ್ರಮದಲ್ಲಿ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಶೇಷಗಿರಿ, ಗುತ್ತಿಗೆದಾರರಾದ ಆರ್​.ಎಂ. ಹನುಮಂತರಾಯಪ್ಪ, ಸುಬ್ಬರಾಯಪ್ಪ ಇತರರು ಇದ್ದರು.
Published on
ಪಾವಗಡ: ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು DAIRY ಮತ್ತು ಸ್ವಾವಲಂಬಿ ಜೀವನ ನಡೆಸಲು ಸಹಕಾರ ಸಂಘಗಳು ಪೂರಕವಾಗಿವೆ ಎಂದು ತುಮುಲ್​ ನಿರ್ದೇಶಕ ಚನ್ನಮಲ್ಲಪ್ಪ ತಿಳಿಸಿದರು.
ತಾಲೂಕಿನ ಕಡಮಲಕುಂಟೆಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಘಟಕ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳಾ ಸದಸ್ಯರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ಅಲ್ಲದೆ ತುಮುಲ್​ನಿಂದ ಹಾಲು ಉತ್ಪಾದಕರಿಗೆ ಹಲವಾರು ಪೂರಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಮೆಗಾ ಡೇರಿ ಪ್ರಾರಂಭಿಸಲಾಗುವುದು. ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯ ಸೇರಿ ಹಲವು ಸೌಲತ್ತುಗಳಿವೆ. ರೈತರು ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿ ಸಂಘದ ಪ್ರಗತಿಗೆ ಸಹಕರಿಸಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಐ.ಜಿ.ನಾಗರಾಜ್​, ಪುರಸಭೆ ಮಾಜಿ ಸದಸ್ಯ ರವಿ, ಮುಖಂಡರಾದ ನಾಗಭೂಷಣ್​, ಧರ್ಮಪಾಲಯಾದವ್​, ವಕೀಲರಾದ ಹನುಮಂತರಾಯಪ್ಪ, ಶ್ರೀರಾಮಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಲಕ್ಷಿ$್ಮ, ಉಪಾಧ್ಯೆ ವಿಜಯಲಕ್ಷಿ$್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net