ಡೇರಿಗಳು ರೈತರಿಗೆ ಮಾತೃ ಸಮಾನ / NANDAGUDI

ನಂದಗುಡಿ ಹೋಬಳಿಯ ನಲವಾಗಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಸರಬರಾಜು ಮಾಡುವ 45 ರೈತರಿಗೆ ಬಮುಲ್​ ವತಿಯಿಂದ ರಿಯಾಯಿತಿ ದರದಲ್ಲಿ ಮ್ಯಾಟ್​ಗಳನ್ನು ವಿತರಿಸಲಾಯಿತು. ಉಪಾಧ್ಯೆ ಭಾರತಿ, ನಿರ್ದೇಶಕರಾದ ನಂಜುಂಡೇಶ್ವರ, ಎನ್​.ಎಂ.ಸತೀಶ್​, ರಾಕೇಶ್​, ಎಂ.ಜಿ.ನಾಗೇಶ್​, ಎಸ್​.ಎನ್​. ವೀರೇಶ್​, ಎನ್​.ಕೆ.ದೇವೇಗೌಡ, ಎಸ್​.ಆರ್​.ಬೀರೇಶ್​ ಕುಮಾರ್​,ಎನ್​.ಎಂ.ಕಿರಣ್​ ಕುಮಾರ್​, ಉಮಾ, ಎನ್​.ಆರ್​.ಮಂಜುಳಾ ಇತರರು ಇದ್ದರು.

Published on

ನಂದಗುಡಿ :

ಡೇರಿಗಳು ಗ್ರಾಮೀಣ ರೈತರ ಪಾಲಿಗೆ ತಾಯಿ ಸಮಾನವಾಗಿವೆ ಎಂದು ನಲವಾಗಿಲು

ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಗಿರೀಶ್​ ಹೇಳಿದರು.

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ನಲವಾಗಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂದ ಆವರಣದಲ್ಲಿ ಹಮ್ಮಿಕೊಂಡಿದ್ದ 45 ಮಂದಿ ಹಾಲು ಪೂರೈಕೆ ರೈತರಿಗೆ ಬಮುಲ್​ ವತಿಯಿಂದ ಸಬ್ಸಿಡಿ ದರದಲ್ಲಿ ನೀಡಿದ್ದ ಮ್ಯಾಟ್​ಗಳನ್ನು ವಿತರಿಸಿ ಮಾತನಾಡಿದರು.

ಮಕ್ಕಳನ್ನು ತಾಯಿ ಪೋಷಣೆ, ಪಾಲನೆ ಮಾಡಿದಂತೆ ಡೈರಿಗಳಿಗೆ ಉತ್ತಮ ಹಾಲು ಸರಬರಾಜು ಮಾಡಿದರೆ ಡೈರಿ ಉಳಿಯುತ್ತದೆ, ಡೈರಿ ಉಳಿದರೆ ರೈತರನ್ನು ಪೋಷಣೆ ಮಾಡಬಲ್ಲದು. ಇದು ರೈತರ ನೆಮ್ಮದಿ ಜೀವನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನಿರ್ದೇಶಕ ಜಿ.ಮೂರ್ತಿ ಮಾತನಾಡಿ, ಯಾವುದೇ ಸಂ ಸಂಸ್ಥೆ, ಚುನಾವಣೆಗಳಲ್ಲಿ ಚುನಾಯಿತರಾಗಿ ಗೆದ್ದು ಬಂದ ಮೇಲೆ ಅಧಿಕಾರ ಶಾಶ್ವತಲ್ಲ. ಅಧಿಕಾರ ಸಿಕ್ಕಾಗ ನಾವು ರೈತರಿಗೆ ಸಿಗುವಂತಹ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ಸಂದ ನಿರ್ದೇಶಕರಿಗೆ ಇರುತ್ತದೆ. ಅದೇ ರೀತಿ ನಮ್ಮ ತಾಲೂಕಿನ ಬಮುಲ್​ ನಿರ್ದೇಶಕ ಬಿ.ವಿ ಸತೀಶ್​ ಗೌಡ ಅವರು ರೈತರಿಗೆ ಸಿಗುವ ಸೌಲಭ್ಯಗಳ ಪ್ರಯೋಜನ ನಮ್ಮ ರೈತರಿಗೆ ಸಿಗಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ 1.300 ರೂ.ಗಳನ್ನು ರೈತರು ಪಾವತಿಸಿದರೆ,1.355 ಬಮುಲ್​ ಕಡೆಯಿಂದ ನೀಡಲಾಗುತ್ತದೆ. ಇಂದು 45 ರೈತರಿಗೆ ಮ್ಯಾಟ್​ ವಿತ್ತರಿಸಲಾಗಿದೆ. ಇನ್ನುಳಿದ35 ರೈತರಿಗೆ ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.

ಈ ಬಾರಿ ಸಂ14.77 ಲಕ್ಷ ರೂ.ಲಾಭಾಂಶ ಹೊಂದಿದ್ದು, ಶೇ. 2. 77. ಬೋನಸ್​ ನೀಡಲಾಗುತ್ತಿದೆ.ಸಂಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಮೂವರು ರೈತರನ್ನು ಸನ್ಮಾನಿಸಲಾಗುತ್ತದೆ. ಸಂಕ್ಕೆ ಹಾಲು ಸರಬರಾಜು ಮಾಡುವ 8 ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗಿದೆ. ರಾಸುಗಳಿಗೆ ವಿಮೆ, ಆರೋಗ್ಯ ತಪಾಸಣೆಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಣ್ಣ, ರೈತರಾದ ಎಸ್​.ಸಿ.ಬೀರಪ್ಪ, ರಜನಿಕಾಂತ್​, ಕೃಷ್ಣಪ್ಪ, ಆಂಜಿನಪ್ಪ, ರಾಮಚಂದ್ರಪ್ಪ, ಹಾಲು ಪರೀಕ್ಷಕ ಎನ್​.ಡಿ.ಅನಿಲ್​ ಕುಮಾರ್​, ಸಹಾಯಕ ಎನ್​.ಎಂ ಚಂದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net