ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಅಡಿಕೆ ಮತ್ತು ತೆಂಗಿನಕಾಯಿ ಮಾರಾಟದಲ್ಲಿ ಲಾಭ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಪದವಿ ಪ್ರಾಪ್ತಿಯಲ್ಲಿ ಇದ್ದ ಅಡೆತಡೆ ನಿವಾರಣೆ. ದೈಹಿಕ ಕಸರತ್ತಿನ ಶಿಕ್ಷಕರಿಗೆ ಬೇಡಿಕೆ. ಸಗಟು ವ್ಯಾಪಾರದಲ್ಲಿ ಲಾಭ ಬರುವುದು. ಶುಭಸಂಖ್ಯೆ: 8

ವೃಷಭ: ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ. ತಾಯಿ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ. ಆಯುರ್ವೆದ ವೈದ್ಯರಿಗೆ ಬೇಡಿಕೆ. ಶುಭಸಂಖ್ಯೆ: 7

ಮಿಥುನ: ತಾಂತ್ರಿಕ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಛಾಯಾಗ್ರಾಹಕರಿಗೆ ಹೆಚ್ಚು ಸಂಪಾದನೆ. ಆಹಾರ ಪದಾರ್ಥ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2

ಕಟಕ: ಆಸ್ತಿ ವಿವಾದಗಳನ್ನು ಮಾತುಕತೆಯ ಮುಖಾಂತರ ಬಗೆಹರಿಸಿಕೊಳ್ಳಿ. ಕೃಷಿ ಉಪಯೋಗಕ್ಕಾಗಿ ವಾಹನ ಖರೀದಿಗೆ ಸುಸಮಯ. ಶುಭಸಂಖ್ಯೆ: 6

ಸಿಂಹ: ಧಾರಾವಾಹಿ ನಿರ್ವಪಕರಿಗೆ ಲಾಭ. ಮೆಡಿಕಲ್ ವ್ಯವಹಾರದಲ್ಲಿ ಅಭಿವೃದ್ಧಿ. ಸರ್ಕಾರಿ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ. ಶುಭಸಂಖ್ಯೆ:7

ಕನ್ಯಾ: ಹೋಟೆಲ್ ವ್ಯವಹಾರದಲ್ಲಿ ಲಾಭ. ಸಪ್ತಮದ ಶನಿಯಿಂದ ದಾಂಪತ್ಯದಲ್ಲಿ ಏರುಪೇರು. ವಿದೇಶ ಪ್ರಯಾಣದ ಕನಸು ನನಸು. ಶುಭಸಂಖ್ಯೆ:3

ತುಲಾ: ಪೀಠೋಪಕರಣ ಮಾರಾಟದಲ್ಲಿ ಲಾಭ. ಸಂಗೀತಗಾರರಿಗೆ ಉತ್ತಮ ವೇದಿಕೆ ಲಭ್ಯ. ಗೋಶಾಲೆ ಅಭಿವೃದ್ಧಿಗೆ ಧನ ಹರಿದು ಬರಲಿದೆ.ಶುಭಸಂಖ್ಯೆ:5

ವೃಶ್ಚಿಕ: ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಆತ್ಮೀಯ ಸ್ನೇಹಿತರ ಭೇಟಿ. ಅಡಿಕೆ ಮತ್ತು ತೆಂಗಿನಕಾಯಿ ಮಾರಾಟದಲ್ಲಿ ಲಾಭ: ಶುಭಸಂಖ್ಯೆ:4

ಧನಸ್ಸು: ನಿವೇಶನ ಖರೀದಿಗೆ ನಿರ್ಧಾರ. ಕಲಾವಿದರು ಅವಕಾಶ ಸದುಪಯೋಗಪಡಿಸಿಕೊಳ್ಳಿ. ಸ್ನಾಯು ಸಂಬಂಧಿ ರೋಗ ಗುಣಮುಖ. ಶುಭಸಂಖ್ಯೆ:2

ಮಕರ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಧಾರ್ವಿುಕ ಕ್ಷೇತ್ರದ ನೇತಾರರಿಗೆ ಶುಭದಿನ. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 1

ಕುಂಭ: ನಿಮ್ಮ ಪರವಾಗಿ ಸಾಮಾಜಿಕವಾಗಿ ಬೆಂಬಲ ದೊರೆಯಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಆಧ್ಯಾತ್ಮಿಕ ಚಿಂತನೆಯುತ್ತ ಮನಸ್ಸು. ಶುಭಸಂಖ್ಯೆ:1

ಮೀನ: ಕೊಟ್ಟ ಹಣ ತಿರುಗಿ ಬರಲಿದೆ. ವಕೀಲರಿಗೆ ವೃತ್ತಿಯಲ್ಲಿ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ಅನಿರೀಕ್ಷಿತ ತಿರುವು. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net