ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹಿರಿಯರ ಮಧ್ಯಸ್ಥಿಕೆಯಿಂದ ಕುಟುಂಬ ಕಲಹ ಇತ್ಯರ್ಥ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಹಿರಿಯರ ಮಧ್ಯಸ್ಥಿಕೆಯಿಂದ ಕುಟುಂಬ ಕಲಹ ಇತ್ಯರ್ಥ. ಹಣಕಾಸಿನಲ್ಲಿ ಸ್ಥಿರತೆ. ಹೊಸ ಉದ್ಯೋಗದಲ್ಲಿ ಅತಂತ್ರತೆ ಕಾಡಲಿದೆ. ಶುಭಸಂಖ್ಯೆ: 9

ವೃಷಭ: ಆಹಾರ ಪದಾರ್ಥಗಳ ಸ್ವಂತ ಉದ್ಯಮ ಸ್ಥಾಪನೆಗೆ ನಿರ್ಧಾರ. ವೈದ್ಯ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಸಿದ್ದಿ. ಶುಭಸಂಖ್ಯೆ: 6

ಮಿಥುನ: ಕೃಷಿ ಭೂಮಿ ಖರೀದಿಗೆ ನಿರ್ಧಾರ. ಮಕ್ಕಳ ವಿದ್ಯಾಭ್ಯಾಸ ನಿಮಿತ್ತ ದೂರದೂರಿಗೆ ಪ್ರಯಾಣ. ದಿನಾಂತ್ಯದಲ್ಲಿ ಹಣಗಳಿಕೆ ಹೆಚ್ಚಲಿದೆ. ಶುಭಸಂಖ್ಯೆ: 6

ಕಟಕ: ಆಭರಣ ತಯಾರಿಕರಿಗೆ ಬೇಡಿಕೆ ಹೆಚ್ಚಲಿದೆ. ಭೂ ವಿವಾದ ಕೋರ್ಟ್​ನಲ್ಲಿ ತೀರ್ವನವಾಗಲಿದೆ. ವಕೀಲ ವೃತ್ತಿಯಲ್ಲಿ ಪ್ರಗತಿ. ಶುಭಸಂಖ್ಯೆ: 3

ಸಿಂಹ: ಪ್ರತಿಭೆಗೆ ಸೂಕ್ತ ವೇದಿಕೆ ಲಭ್ಯ. ದೃಢನಿರ್ಧಾರ ಕೈಗೊಳ್ಳಲು ಇದ್ದ ಗೊಂದಲ ಪರಿಹಾರ. ಅಲಂಕಾರಿಕ ವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 4

ಕನ್ಯಾ: ವೃತ್ತಿ ಪರಿಣತರಿಗೆ ಬೇಡಿಕೆ ಹೆಚ್ಚಲಿದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ವರ್ಗಾವಣೆ ಸಾಧ್ಯತೆ. ರಚನಾತ್ಮಕ ಕಾರ್ಯಕ್ಕೆ ಪ್ರಶಂಸೆ. ಶುಭಸಂಖ್ಯೆ: 4

ತುಲಾ: ಹಣಕಾಸು ಸಂಸ್ಥೆ ಉದ್ಯೋಗಿಗಳಿಗೆ ವೇತನ ಹೆಚ್ಚಳ. ಉದ್ಯಮ ಸ್ಥಾಪನೆಗೆ ಸುಸಮಯ. ವಿದೇಶದಲ್ಲಿರುವ ಮಕ್ಕಳಿಂದ ಸಹಾಯ. ಶುಭಸಂಖ್ಯೆ: 7

ವೃಶ್ಚಿಕ: ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಛಾಯಾಗ್ರಾಹಕರಿಗೆ ಧನಲಾಭ. ದಾಂಪತ್ಯ ಜೀವನದಲ್ಲಿದ್ದ ಮನಸ್ತಾಪ ಪರಿಹಾರ. ಶುಭಸಂಖ್ಯೆ: 5

ಧನಸ್ಸು: ನರ್ಸ್ ವೃತ್ತಿಗೆ ಆಯ್ಕೆ. ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಗಲಿದೆ. ಭೂ ವಿವಾದ ನ್ಯಾಯಾಲಯದ ಮೆಟ್ಟಿಲೆರಲಿದೆ. ಶುಭಸಂಖ್ಯೆ: 9

ಮಕರ: ಹಳೇ ಸ್ನೇಹಿತರ ಭೇಟಿ. ಕ್ರೀಡಾ ವ್ಯವಸ್ಥಾಪಕರಿಗೆ ಧನಲಾಭ. ಯಕ್ಷಗಾನ ನಾಟ್ಯ ಸಂಗೀತ ಕಲಾವಿದರಿಗೆ ಧನ ರೂಪದ ಪುರಸ್ಕಾರ. ಶುಭಸಂಖ್ಯೆ: 8

ಕುಂಭ: ಧಾರ್ವಿುಕ ವೃತ್ತಿಪರರಿಗೆ ಅಪಾರ ಗಳಿಕೆ. ಹಣ ಹೂಡಿಕೆಗೆ ಸೂಕ್ತ ಸಮಯ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಪರಸ್ಪರ ಒಡಂಬಡಿಕೆ. ಶುಭಸಂಖ್ಯೆ: 2

ಮೀನ; ಚಿತ್ರಕಲಾವಿದರಿಗೆ ವಿದೇಶದಿಂದ ಆಹ್ವಾನ. ಸಂಶೋ ಧನಾ ತಜ್ಞರಿಗೆ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net